Connect with us

LATEST NEWS

ಕಾರ್ಕಳ – ಹೋಮ್ ನರ್ಸ್ ಕೆಲಸಕ್ಕೆ ಬಂದು ವಂಚಿಸಿದ ಇಬ್ಬರು ಆರೋಪಿಗಳು ಅರೆಸ್ಟ್

ಕಾರ್ಕಳ ಡಿಸೆಂಬರ್ 17: ವೃದ್ದರೊಬ್ಬರನ್ನು ನೋಡಿಕೊಳ್ಳಲು ಬಂದಿದ್ದ ಹೋಮ್ ನರ್ಸ್ ಒಬ್ಬ ಲಕ್ಷಾಂತ ರೂಪಾಯಿ ಹಣ ವಂಚಿಸಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.


ಬಂಧಿತರನ್ನು ತೆಳ್ಳಾರ್ ನಿವಾಸಿ ರತ್ನಾಕರ ಸುವರ್ಣ ಯಾನೆ ಭೂಮಿಕಾ ರತ್ನಾಕರ (50) ಹಾಗೂ ಕುಕ್ಕುಂದೂರು ಕುಪ್ಪಬೆಟ್ಟು ನಿವಾಸಿ ಕಾರ್ತಿಕ್ ಶೆಟ್ಟಿ (28) ಎಂದು ಗುರುತಿಸಲಾಗಿದೆ. ರತ್ನಾಕರ ಮಾಲಕತ್ವದ ಅಲೈಟ್‌ಕೇರ್ ಎಂಬ ಸಂಸ್ಥೆಯ ಮೂಲಕ ಕಾರ್ತಿಕ ಶೆಟ್ಟಿ ಕಾರ್ಕಳ ಎಂಬಾತ ಪುರಸಭೆ ವ್ಯಾಪ್ತಿಯ ನಿವಾಸಿ ಶಶಿಧರ (75) ಎಂಬವರ ಮನೆಗೆ ಹೊಂ ನರ್ಸ್ ಕೆಲಸಕ್ಕೆ ಬಂದಿದ್ದನು. ನ.9ರಂದು ರತ್ನಾಕರ, ಶಶಿಧರ್‌ಗೆ 10,000ರೂ. ನಗದು ಹಣ ನೀಡಿ ಒತ್ತಾಯ ಪೂರ್ವಕವಾಗಿ ಕಾರ್ತಿಕ್ ಖಾತೆಗೆ ಗೂಗಲ್ ಪೇ ಮಾಡಿಸಿದ್ದನು.

ಈ ವೇಳೆ ಗೂಗಲ್ ಪೇ ಪಿನ್ ನಂಬರ್ ನೋಡಿದ್ದ ರತ್ನಾಕರ, ನ.10ರಿಂದ ಡಿ.8ರವರೆಗೆ ಶಶಿಧರ್ ಅವರ ಬ್ಯಾಂಕ್ ಖಾತೆಯಿಂದ ಗೂಗಲ್ ಪೇ ಮುಖಾಂತರ 9,80,000ರೂ. ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿ ಮೋಸ ಮಾಡಿರುವುದಾಗಿ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *