LATEST NEWS
ಸುರತ್ಕಲ್ ಚೂರಿ ಇರಿತ ಪ್ರಕರಣ -ಮತ್ತೋರ್ವ ಆರೋಪಿ ಸೆರೆ

ಸುರತ್ಕಲ್ ಸೆಪ್ಟೆಂಬರ್ 05: ಸುರತ್ಕಲ್ ನಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೈಕಂಬ ಕಿನ್ನಿಕಂಬಳ ನಿವಾಸಿ ಪುನೀತ್(29 ) ಎಂದು ಗುರುತಿಸಲಾಗಿದೆ. ಇದರೊಂದಿಗೆ ಬಂದಿತರ ಸಂಖ್ಯೆ 4ಕ್ಕೆ ಏರಿದೆ.
ಆಗಸ್ಟ್ 31 ರಂದು ಕಳವಾರಿನಲ್ಲಿ ಗಲಾಟೆ ನಡೆದು ಕಳವಾರು ನಿವಾಸಿ ಗಂಟೆ ರಿಯಾಝ್ ಎಂಬಾತನ ಮೇಲೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾತನಾಡಲಿದೆ ಎಂದು ಕರೆಸಿ ಆರೋಪಿಗಳು ಅಬ್ದುಲ್ ಸಫ್ವಾನ್ ಗೆ ಡ್ರಾಗರ್ ಹಾಗೂ ಚೂರಿಯಲ್ಲಿ ಇರಿದು ಗಾಯಗೊಳಿಸಿದ್ದರು. ಈಗಾಗಲೇ ಪ್ರಮುಖ ಅರೋಪಿ ಪ್ರಶಾಂತ್ ಯಾನೆ ಪಚ್ಚು, ಕಳವಾರು ಆಶ್ರಯ ಕಾಲನಿ ನಿವಾಸಿ ಧನರಾಜ್ ಮತ್ತು ಕಳವಾರು ಚರ್ಚ್ ಗುಡ್ಡೆ ಸೈಟ್ ನಿವಾಸಿ ಯಜ್ಞೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
