Connect with us

  DAKSHINA KANNADA

  ಮಂಗಳೂರು : ಬಜ್ಜೆಯಲ್ಲಿ 5 ಲಕ್ಷದ ಚಿನ್ನಾಭರಣ ಕದ್ದ ವಿನ್ಸೆಂಟ್ ಡಿಸೋಜಾ ಬಂಧನ..!

  ಮಂಗಳೂರು ಬಜ್ಪೆಯಲ್ಲಿ ಮನೆ ಬಾಗಿಲು ಮುರಿದು ಚಿನ್ನಾಭರಣ ಕದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

  ಮಂಗಳೂರು : ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಗಿಲು ಮುರಿದು ಚಿನ್ನಾಭರಣ ಕದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

  ಬಜಪೆಯ ತಾರೀಕಂಬ್ಳ ನಿವಾಸಿ ವಿನ್ಸೆಂಟ್ ಡಿ”ಸೋಜಾ (34) ಬಂಧಿತ ಆರೋಪಿಯಾಗಿದ್ದಾನೆ.

  ಸೆಪ್ಟೆಂಬರ್ 1 ರಂದು ಈ ಕಳ್ಳತನ ನಡೆದಿತ್ತು.

  ಮಂಗಳೂರಿನ ಬಜಪೆ ಗ್ರಾಮದ ಪೊರ್ಕೋಡಿ ದೇವಸ್ಥಾನದ ರಸ್ತೆಯ ಕರೋಡಿ ಎಂಬಲ್ಲಿರುವ ಮನೆಯ ಬೆಡ್ ರೂಮಿನಲ್ಲಿದ್ದ ಕಬ್ಬಿಣದ ಕಪಾಟಿನ ಮಿನಿಲಾಕರ್ ನ್ನು ಮುರಿದು ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವಾಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

  ಈ ಪ್ರಕರಣದ ಜಾಡು ಹಿಡಿದ ಮಂಗಳೂರು ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ರವರ ನೇತೃತ್ವದಲ್ಲಿ ಬಜಪೆ ಪೊಲೀಸ್ ನಿರೀಕ್ಷಕ ಪ್ರಕಾಶ ರವರ ತಂಡ ಆರೋಪಿ ಬಜಪೆಯ ತಾರೀಕಂಬ್ಳ ನಿವಾಸಿ ವಿನ್ಸೆಂಟ್ ಡಿ”ಸೋಜಾರವನ್ನು ಬಜ್ಪೆಯ ಕಿನ್ನಿಪದವು ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆದುಕೊಂಡು ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಒಟ್ಟು 80 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.

  ಬಜ್ಪೆ ಪಿಎಸ್ಐ ಗುರಪ್ಪ ಕಾಂತಿ, ಪಿಎಸ್‌ಐ ರೇವಣ ಸಿದ್ದಪ್ಪ, ಪಿಎಸ್ಐ ಕುಮಾರೇಶನ್, ಪಿಎಸ್‌ಐ ಶ್ರೀಮತಿ ಲತಾ, ಎಎಸ್‌ಐ ರಾಮ ಪೂಜಾರಿ ಮೇರೆಮಜಲು, ರಶೀದ ಶೇಖ್, ಸುಜನ್, ರೋಹಿತ, ದುರ್ಗಾ ಪ್ರಸಾದ ಶೆಟ್ಟಿ, ಸಂತೋಷ, ಬಸವರಾಜ್ ಪಾಟೀಲ್, ಕೆಂಚನ ಗೌಡ ಮತ್ತು ಇತರ ಸಿಬ್ಬಂದಿ ವರ್ಗದವರು ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply