LATEST NEWS
ಮಹಿಳಾ ಹಾಕಿ ತಂಡಕ್ಕೆ ಪ್ರಧಾನಿ ಮೋದಿಯವರ ಫೋನ್ ಕರೆ…ಕಣ್ಣೀರಿಟ್ಟ ಆಟಗಾರ್ತಿಯರು
ನವದೆಹಲಿ ಅಗಸ್ಟ್ 6:ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಕೆಚ್ಚೆದೆಯ ಹೋರಾಟ ನೀಡಿ ಕಂಚಿನ ಪದಕ ಗೆಲ್ಲುವಲ್ಲಿ ವಿಫಲವಾದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿಯವರ ಕರೆಗೆ ಆಟಗಾರ್ತಿಯರು ಕಣ್ಣೀರಿಟ್ಟ ಘಟನೆ ನಡೆದಿದೆ.
ಬ್ರಿಟನ್ ವಿರುದ್ಧ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಅನುಭವಿಸಿದ ಸೋಲಿನಿಂದ ಆಟಗಾರ್ತಿಯರು ಬೇಸರದಲ್ಲಿದ್ದಾಗ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಆಟಗಾರ್ತಿಯರಿಗೆ ಧೈರ್ಯ ತುಂಬಿ ಇಡೀ ದೇಶಕ್ಕೆ ನಿಮ್ಮ ಸಾಧನೆ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದರು.
ರಾಣಿ ರಾಂಪಾಲ್ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಕೊನೆ ಕ್ಷಣದಲ್ಲಿ ಕಂಚಿನ ಪದಕ ಗೆಲ್ಲದೇ ಪರಾಭವಗೊಂಡಿತು. ಗ್ರೇಟ್ ಬ್ರಿಟನ್ ಎದುರಿನ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡವು 4-3 ಗೋಲುಗಳ ಅಂತರದ ಸೋಲು ಅನುಭವಿಸಿತ್ತು.
ಪರಾಭವಗೊಂಡ ಹಿನ್ನೆಲೆಯಲ್ಲಿ ವನಿತೆಯರು ಕಣ್ಣೀರು ಸುರಿಸಿದ್ದಾರೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಸಾಂತ್ವನ ಮಾಡಿದ್ದಾರೆ. ನಿಮ್ಮ ಸಾಧನೆಯ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ ಎಂದು ಹುರಿದುಂಬಿಸಿದ್ದಾರೆ. ಅಮೋಘ ಪ್ರದರ್ಶನ ತೋರುವ ಮೂಲಕ ಹಾಕಿ ಗತವೈಭವ ಮರುಕಳಿಸುವಂತೆ ಮಾಡಿದ್ದೀ ರ. ನೀವು ಕಣ್ಣೀರು ಹಾಕಬೇಡಿ. ನಿಮ್ಮ ಸಾಧನೆಯ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ. ನೀವೆಲ್ಲರೂ ಅದ್ಭುತ ಆಟವಾಡಿದ್ದು, ಸಾಕಷ್ಟು ಬೆವರು ಸುರಿಸಿದ್ದೀರಿ. ಕಳೆದ 5-6 ವರ್ಷಗಳಿಂದ ನೀವು ಪಟ್ಟ ಪರಿಶ್ರಮವು ದೇಶದ ಕೋಟ್ಯಂತರ ಹೆಣ್ಮಕ್ಕಳಿಗೆ ಪ್ರೇರಣೆಯಾಗಿದ್ದು, ತಂಡದ ಎಲ್ಲ ಆಟಗಾರ್ತಿಯರು ಹಾಗೂ ಕೋಚ್‌ಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ.
ದೇಶಕ್ಕೆ ನಿಮ್ಮ ಸಾಧನೆಯ ಬಗ್ಗೆ ಹೆಮ್ಮೆಯಿದೆ. ಹಾಗಾಗಿ ನೀವು ಬೇಸರ ಪಡುವ ಅಗತ್ಯವಿಲ್ಲ. ಎಷ್ಟು ದಶಕಗಳ ಬಳಿಕ ನಿಮ್ಮ ಮೂಲಕ ಭಾರತದ ಹಾಕಿ ಪುನರುಜ್ಜೀವನಗೊಂಡಿದೆ. ನಿಮ್ಮ ಕಠಿಣ ಪರಿಶ್ರಮದಿಂದ ಮಾತ್ರ ಅದು ಸಾಧ್ಯವಾಗಿದೆ” ಎಂದಿದ್ದಾರೆ.