Connect with us

    LATEST NEWS

    ಅಗಸ್ಟ್ 23 ರಿಂದ 9 ರಿಂದ 12 ರವರೆಗೆ ಭೌತಿಕ ತರಗತಿ ಆರಂಭ – ಸಿಎಂ ಬಸವರಾಜ ಬೊಮ್ಮಾಯಿ

    ಬೆಂಗಳೂರು ಅಗಸ್ಟ್ 6: ಅಗಸ್ಟ್ 23 ರಿಂದ 9 ರಿಂದ 12 ರವರೆಗೆ ಭೌತಿಕವಾಗಿ ಶಾಲೆಗಳನ್ನು ಪ್ರಾರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.


    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶಾಲೆಗಳ ಆರಂಭದ ಕುರಿತು ತಜ್ಞರ ಜತೆ ಚರ್ಚಿಸಲಾಗಿದೆ. ಇದೇ 23ರಿಂದ ಶಾಲೆಗಳಲ್ಲಿ ಭೌತಿಕ ತರಗತಿ ಆರಂಭಿಸಲಾಗುವುದು. 9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ತರಗತಿ ಆರಂಭಿಸಲಾಗುವುದು, ಎರಡು ಗುಂಪುಗಳಲ್ಲಿ ತರಗತಿ ನಡೆಸಲು ನಿರ್ಧರಿಸಲಾಗಿದೆ. ದಿನ ಬಿಟ್ಟು ದಿನ ತರಗತಿ ನಡೆಯಲಿದೆ’ ಎಂದರು. ಒಂದರಿಂದ ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭ ಕುರಿತು ತೀರ್ಮಾನಿಸಿಲ್ಲ. ಆಗಸ್ಟ್ ಅಂತ್ಯದಲ್ಲಿ ಮತ್ತೊಮ್ಮೆ ಸಭೆ ನಡೆಸಿ ಕೋವಿಡ್ ಸ್ಥಿತಿಗತಿ ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply