KARNATAKA
ರೈಲ್ವೆ ಸಿಬ್ಬಂದಿಗೆ ಪ್ರಧಾನಿ ಮೋದಿ ಬಂಪರ್ ಕೊಡುಗೆ : 1968.87 ಕೋಟಿ ರೂ. ಬೋನಸ್ ನೀಡಲು ಕೇಂದ್ರ ಸಂಪುಟ ಒಪ್ಪಿಗೆ..!
ಭಾರತೀಯ ರೈಲ್ವೇ ಸಿಬಂದಿಗೆ ಕೇಂದ್ರ ಬಂಪರ್ ಕೊಡುಗೆ ಘೋಷಣೆ ಮಾಡಿದ್ದು, 1968.87 ಕೋಟಿ ರೂ. ಬೋನಸ್ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಹುಬ್ಬಳ್ಳಿ : ಭಾರತೀಯ ರೈಲ್ವೇ ಸಿಬಂದಿಗೆ ಕೇಂದ್ರ ಬಂಪರ್ ಕೊಡುಗೆ ಘೋಷಣೆ ಮಾಡಿದ್ದು, 1968.87 ಕೋಟಿ ರೂ. ಬೋನಸ್ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ 2022-23ನೇ ಹಣಕಾಸು ವರ್ಷದಲ್ಲಿ ರೈಲ್ವೆ ಸಿಬ್ಬಂದಿಗೆ 78 ದಿನದ ವೇತನಕ್ಕೆ ಸಮನಾದ ಉತ್ಪಾದನೆ ಆಧಾರಿತ ಬೋನಸ್ (ಪಿಎಲ್ ಬಿ) ನೀಡಲು ಅನುಮೋದನೆ ನೀಡಿದೆ.
ಇದರಲ್ಲಿ ರೈಲ್ವೆಯ ಎಲ್ಲಾ ಅರ್ಹ ಸಿಬ್ಬಂದಿ ಅಂದರೆ ಟ್ರಾಕ್ ನಿರ್ವಾಹಕರು, ಲೋಕೋ ಪೈಲಟ್ ಗಳು, ಟ್ರೈನ್ ಮ್ಯಾನೇಜರ್ಸ್ (ಗಾರ್ಡ್ಸ್), ಸ್ಟೇಷನ್ ಮಾಸ್ಟರ್, ಸೂಪರ್ ವೈಸರ್ಸ್, ಟೆಕ್ನಿಷಿಯನ್ಸ್, ಟೆಕ್ನಿಷಿಯನ್ ಹೆಲ್ಪರ್ಸ್, ಪಾಯಿಂಟ್ಸಮನ್, ಸಚಿವಾಲಯದ ಸಿಬ್ಬಂದಿ ಮತ್ತು ಗ್ರೂಪ್ ಸಿ ಸಿಬ್ಬಂದಿ (ಆರ್ ಪಿಎಫ್ ಮತ್ತು ಆರ್ ಪಿಎಸ್ ಎಫ್ ಹೊರತುಪಡಿಸಿ) ಇದಕ್ಕೆ ಒಳಪಡಲಿದ್ದಾರೆ.
ರೈಲ್ವೆ ಸಿಬ್ಬಂದಿಯ ಅತ್ಯುತ್ತಮ ಸಾಧನೆಯನ್ನು ಗುರುತಿಸಿ, ಕೇಂದ್ರ ಸರ್ಕಾರವು 11,07,346 ರೈಲ್ವೆ ಉದ್ಯೋಗಿಗಳಿಗೆ 1968.87 ಕೋಟಿ ರೂ. ಪಿಎಲ್‌ಬಿ ಪಾವತಿಗೆ ಅನುಮೋದನೆ ನೀಡಿದೆ. 2022-2023ರಲ್ಲಿ ರೈಲ್ವೇಯ ಸಾಧನೆ ಉತ್ತಮವಾಗಿತ್ತು. ರೈಲ್ವೆಯು 1509 ಮಿಲಿಯನ್ ಟನ್ ಗಳ ದಾಖಲೆಯ ಸರಕುಗಳನ್ನು ಲೋಡ್ ಮಾಡಿದೆ ಮತ್ತು ಸುಮಾರು 6.5 ಬಿಲಿಯನ್ ಪ್ರಯಾಣಿಕರನ್ನು ಸಾಗಿಸಿದೆ.
ಈ ದಾಖಲೆಯ ಸಾಧನೆಗೆ ಹಲವು ಅಂಶಗಳು ಕೊಡುಗೆ ನೀಡಿವೆ. ರೈಲ್ವೆಯಲ್ಲಿ ಸರ್ಕಾರದಿಂದ ದಾಖಲೆಯ ಬಂಡವಾಳ ವೆಚ್ಚದ ಹರಿವು ಹೆಚ್ಚಾಗಿರುವುದರಿಂದ ಮೂಲಸೌಕರ್ಯದಲ್ಲಿನ ಸುಧಾರಣೆ, ಕಾರ್ಯಾಚರಣೆಗಳಲ್ಲಿ ದಕ್ಷತೆ ಮತ್ತು ಉತ್ತಮ ತಂತ್ರಜ್ಞಾನ ಇತ್ಯಾದಿಗಳು ಸೇರಿವೆ.
ಪಿಎಲ್‌ಬಿ ಪಾವತಿಯು ರೈಲ್ವೇ ಉದ್ಯೋಗಿಗಳನ್ನು ಮತ್ತಷ್ಟು ಸಾಧನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲು ಉತ್ತೇಜಿಸಲು ಪ್ರೋತ್ಸಾಹ ನೀಡಲಿದೆ.
You must be logged in to post a comment Login