Connect with us

    LATEST NEWS

    ಜೋಹಾನ್ಸ್ ಬರ್ಗ್ – ನೆಲದ ಮೇಲೆ ಬಿದ್ದಿದ್ದ ಭಾರತದ ಧ್ವಜವನ್ನು ಎತ್ತಿ ಜೇಬಿನಲ್ಲಿಟ್ಟುಕೊಂಡ ಪ್ರಧಾನಿ ನರೇಂದ್ರ ಮೋದಿ

    ಜೋಹಾನ್ಸ್ ಬರ್ಗ್ ಅಗಸ್ಟ್ 23: ಬ್ರಿಕ್ಸ್​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜೋಹಾನ್ಸ್​ಬರ್ಗ್​​ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸ್ಟೇಜ್ ಒಂದರ ಮೇಲೆ ಬಿದ್ದಿದ್ದ ಭಾರತದ ಬಾವುಟವನ್ನು ಎತ್ತಿ ತಮ್ಮ ಜೇಬಿನಲ್ಲಿರಿಸಿಕೊಂಡ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬ್ರಿಕ್ಸ್​ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದ ಪೋಟೋ ತೆಗೆಯಲು ಸ್ಟೇಜ್ ಮೇಲೆ ತೆರಳುತ್ತಿರುವಾಗ ಸ್ಟೇಜ್ ಮೇಲೆ ಭಾರತದ ಧ್ವಜ ಬಿದ್ದಿರುವುದನ್ನು ನೋಡಿದ್ದಾರೆ.

    ಕೂಡಲೇ ಅದನ್ನು ತೆಗೆದು ತಮ್ಮ ಜೇಬಿಗೆ ಇಳಿಸಿದ್ದಾರೆ. ಮೋದಿ ಜೊತೆ ಇದ್ದ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಪೋಸಾ ಅವರು ಭಾರತದ ಧ್ವಜವನ್ನ ತೆಗೆದು ಸಿಬ್ಬಂದಿಗಳಿಗೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *