Connect with us

    LATEST NEWS

    ಸರ್ಜಿಕಲ್ ಸ್ಟ್ರೈಕ್ ನ ಸಂಪೂರ್ಣ ಮಾಹಿತಿ ನೀಡಿದ ಪ್ರಧಾನಿ ನರೇಂದ್ರ ಮೋದಿ

    ಸರ್ಜಿಕಲ್ ಸ್ಟ್ರೈಕ್ ನ ಸಂಪೂರ್ಣ ಮಾಹಿತಿ ನೀಡಿದ ಪ್ರಧಾನಿ ನರೇಂದ್ರ ಮೋದಿ

    ನವದೆಹಲಿ ಜನವರಿ 1: ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ಪ್ರತಿಕಾರವಾಗಿ ನಡೆದ ಸರ್ಜಿಕಲ್ ದಾಳಿ ಬಗ್ಗೆ ಎಎನ್ ಐ ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

    ಎಎನ್‍ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ಮಾಡಿ 20 ಯೋಧರನ್ನು ಹತೈಗೆದಿದ್ದರು. ಉರಿ ದಾಳಿಯಲ್ಲಿ ಭಾರತದ ಯೋಧರನ್ನು ಸಜೀವ ದಹನ ಮಾಡಿದ ಉಗ್ರರ ಕೃತ್ಯಕ್ಕೆ ತಿರುಗೇಟು ನೀಡುವ ಕೋಪ ನನ್ನಲ್ಲಿ ಮತ್ತು ಸೇನೆಯಲ್ಲಿತ್ತು. ಆದ್ದರಿಂದ ನಿರ್ದಿಷ್ಟ ದಾಳಿ ನಡೆಸುವ ತೀರ್ಮಾನ ಕೈಗೊಂಡೆವು ಎಂದು ಹೇಳಿದರು.

    ಭಾರತೀಯ ಸೇನಾ ಪಡೆಯ ಸುರಕ್ಷೆ ಮತ್ತು ರಕ್ಷಣೆಯನ್ನು ಪರಿಗಣಿಸಿ ನಿರ್ದಿಷ್ಟ ದಾಳಿ ನಡೆಸುವ ದಿನವನ್ನು ಎರಡು ಬಾರಿ ಬದಲಿಸಿದ್ದೆವು ಎಂದಿದ್ದಾರೆ.

    ಸರ್ಜಿಕಲ್ ಸ್ಟ್ರೈಕ್ ಅಪಾಯಕಾರಿ ಕೆಲಸ ಎಂದು ನನಗೆ ಗೊತ್ತಿತ್ತು. ನಾನು ಯಾವುದೇ ರಾಜಕೀಯ ಅಪಾಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಯೋಧರ ಸುರಕ್ಷೆ ಅಷ್ಟೇ ನನಗೆ ಮುಖ್ಯವಾದುದು. ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಡಲು ಸಿದ್ಧರಾದ ಕಮಾಂಡೊಗಳಿಗೆ ಯಾವುದೇ ರೀತಿಯ ಹಾನಿಯುಂಟಾಗಲು ನಾನು ಬಯಸಿಲ್ಲ ಎಂದು ತಿಳಿಸಿದರು.

    ಕಾರ್ಯಾಚರಣೆಗೆ ತೆರಳುವ ಮುನ್ನ ಈ ಕಾರ್ಯಾಚರಣೆಯಲ್ಲಿ ನೀವು ಯಶಸ್ವಿಯಾದರೂ ಇಲ್ಲದೇ ಇದ್ದರೂ ಅದರ ಬಗ್ಗೆ ಯೋಚಿಸದೆ ಸೂರ್ಯೋದಯಕ್ಕೆ ಮುನ್ನ ವಾಪಸ್ ಬನ್ನಿ. ಈ ಕಾರ್ಯಾಚರಣೆಯನ್ನು ವಿಸ್ತರಿಸಬೇಡಿ ಎಂದು ನಾನು ಸೇನೆಯ ಕಮಾಂಡೊಗಳಿಗೆ ಹೇಳಿದ್ದೆ ಎಂದು ತಿಳಿಸಿದರು.

    ಸರ್ಜಿಕಲ್ ಸ್ಟ್ರೈಕ್ ನ ಪ್ರತಿಯೊಂದು ಮಾಹಿತಿಯನ್ನು ಇಡೀ ರಾತ್ರಿ ಪಡೆಯುತ್ತಿದೆ ಎಂದು ಹೇಳಿದ ಅವರು ಸುರ್ಯೋದಯದ ನಂತರ ಸುಮಾರು 1 ಗಂಟೆಗಳ ಕಾಲ ನನಗೆ ಮಾಹಿತಿ ಬರುವುದು ನಿಂತು ಹೋಯಿತು. ಈ ಕ್ಷಣದಲ್ಲಿ ನನ್ನ ಆತಂಕ ಹೆಚ್ಚಾಯಿತು, ಸೂರ್ಯೋದಯ ಆಗಿ ಒಂದು ಗಂಟೆ ಆಗಿತ್ತು. ಆ ಹೊತ್ತು ತುಂಬಾ ಕಠಿಣ ಕ್ಷಣವಾಗಿತ್ತು. ಅಷ್ಟೊತ್ತಿಗೆ ಸಂದೇಶ ಬಂತು. ಸೇನಾ ಪಡೆ ಇಲ್ಲಿಯವರೆಗೆ ವಾಪಸ್ ಬಂದಿಲ್ಲ ಆದರೆ ಎರಡು, ಮೂರು ಘಟಕಗಳು ಸುರಕ್ಷಿತ ವಲಯಕ್ಕೆ ತಲುಪಿದೆ. ಹಾಗಾಗಿ ಆತಂಕ ಬೇಡ ಎಂದಾಗಿತ್ತು ಆ ಸಂದೇಶ. ಆದರೆ ಕೊನೆಯ ವ್ಯಕ್ತಿ ಸುರಕ್ಷಿತವಾಗಿ ತಲುಪುವವರೆಗೆ ನನಗೆ ಸಮಾಧಾನ ಆಗಲ್ಲ ಎಂದು ನಾನು ಹೇಳಿದ್ದೆ ಎಂದು ತಿಳಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *