Connect with us

    BANTWAL

    ಪ್ರಧಾನಿ ನರೇಂದ್ರ ಮೋದಿ ಮಹಾನ್ ಕಳ್ಳ – ಜಿಗ್ನೇಶ್ ಮೇವಾನಿ

    ಪ್ರಧಾನಿ ನರೇಂದ್ರ ಮೋದಿ ಮಹಾನ್ ಕಳ್ಳ – ಜಿಗ್ನೇಶ್ ಮೇವಾನಿ

    ಬಂಟ್ವಾಳ ಎಪ್ರಿಲ್ 28: ಪ್ರಧಾನಿ ನರೇಂದ್ರ ಮೋದಿ ಒರ್ವ ಮಹಾನ್ ಕಳ್ಳನಾಗಿದ್ದು, ದೇಶದ ಕಾವಲುಗಾರ ಎಂದು ಹೇಳಿಕೊಳ್ಳುವ ಮೋದಿ ದೇಶವನ್ನೇ ಲೂಟಿ ಮಾಡುತ್ತಿದ್ದಾರೆ ಎಂದು ಗುಜರಾತ್ ನ ವಡ್ ಗಾಂ ವಿಧಾನಸಭಾ ಸದಸ್ಯ ಜಿಗ್ನೇಶ್ ಮೇವಾನಿ ಆರೋಪಿಸಿದ್ದಾರೆ.

    ಸಂವಿಧಾನ ಉಳಿವಿಗಾಗಿ ಕರ್ನಾಟಕ ಎನ್ನುವ ವೇದಿಕೆಯಿಂದ ನಡೆದ ಸ್ವಾಭಿಮಾನಿ ಸಮಾವೇಶವನ್ನು ಉದ್ಧೇಶಿಸಿ ಅವರು ಮಾತನಾಡಿದರು .ದೇಶಪ್ರೇಮಿಗಳು ಎನ್ನುತ್ತಿರುವ ಆರ್.ಎಸ್.ಎಸ್ ನ ಎಷ್ಟು ಜನ ಸ್ವಾತಂತ್ರಕ್ಕಾಗಿ ಬಲಿದಾನ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು ಬಿಜೆಪಿ ಅಂದರೆ ಭ್ರಷ್ಟಾಚಾರಿಗಳ ಪಾರ್ಟಿ ಎಂದರು.

    ದೇಶದ ಕಾವಲುಗಾರ ಎಂದು ಫೋಸ್ ಕೊಡುತ್ತಿರುವ ಪ್ರಧಾನಿ ಮೋದಿ ಒರ್ವ ಮಹಾನ್ ಕಳ್ಳ ಎಂದ ಅವರು ಅದಾನಿ ಸೇರಿದಂತೆ ಹಲವು ಉದ್ಯೋಗಪತಿಗಳು ದೇಶಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಪಂಗನಾಮ ಹಾಕುತ್ತಿದ್ದಾರೆ. ಆದರೆ ಇದನ್ನೆಲ್ಲಾ ತಿಳಿದೂ ಮೋದಿಯವರು ಇವರೊಂದಿಗೆ ಸೇರಿಕೊಂಡು 80 ಪರ್ಸಂಟೇಜ್ ಕಮಿಷನ್ ನಲ್ಲಿ ತೊಡಗಿದ್ದಾರೆ ಎಂದರು.

    ಗುಜರಾತಿನಲ್ಲಿ ರಸ್ತೆ ಅಭಿವೃದ್ಧಿ, ಆರ್ಟ್ ಆಫ್ ಲೀವಿಂಗ್ ಹೀಗೆ ಎಲ್ಲದರಲ್ಲೂ 80 ಪರ್ಸೆಂಟ್ ಕಮಿಷನ್ ಪಡೆದಿದ್ದಾರೆ ಎಂದು ಅವರು ಆರೋಪಿಸಿದರು. ಎಟ್ರಾಸಿಟಿ ಕಾನೂನನ್ನು ಹಿಂಪಡೆಯುವ ಮೂಲಕ ದಲಿತರ ಮೇಲೆ ಇನ್ನಷ್ಟು ದೌರ್ಜನ್ಯ ನಡೆಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *