Connect with us

    KARNATAKA

     ಹುಬ್ಬಳ್ಳಿ ರಾಮೇಶ್ವರಂ ವಿಶೇಷ ರೈಲುಗಳ ಸೇವೆ ವಿಸ್ತರಣೆ

    ಹುಬ್ಬಳ್ಳಿ :  ರೈಲುಗಳ ಸಂಖ್ಯೆ 07355/07356 ಎಸ್.ಎಸ್.ಎಸ್ ಹುಬ್ಬಳ್ಳಿ-ರಾಮೇಶ್ವರಂ-ಎಸ್.ಎಸ್.ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ವಿಶೇಷ ರೈಲುಗಳ ಸೇವೆಯನ್ನು ಈಗಿರುವ ಸಮಯ, ನಿಲುಗಡೆ ಮತ್ತು ಬೋಗಿಗಳ ಸಂಯೋಜನೆಯೊಂದಿಗೆ ವಿಸ್ತರಿಸಲಾಗುತ್ತಿದೆ. ಅವುಗಳ ವಿವರ ಈ ಕೆಳಗಿನಂತಿವೆ.

     

    1. ಹುಬ್ಬಳ್ಳಿಯಿಂದ ಪ್ರತಿ ಶನಿವಾರ ಚಲಿಸುತ್ತಿರುವ ರೈಲು ಸಂಖ್ಯೆ 07355 ಎಸ್.ಎಸ್.ಎಸ್ ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ರೈಲನ್ನು 07.10.2023 ರಿಂದ 30.12.2023 ರವರೆಗೆ ಮುಂದುವರಿಸಲಾಗುತ್ತಿದೆ. ಈ ಮೊದಲು 30.09.2023 ರವರೆಗೆ ಓಡಿಸಲು ಸೂಚಿಸಲಾಗಿತ್ತು.

    2. ರಾಮೇಶ್ವರಂನಿಂದ ಪ್ರತಿ ಭಾನುವಾರ ಚಲಿಸುತ್ತಿರುವ ರೈಲು ಸಂಖ್ಯೆ 07356 ರಾಮೇಶ್ವರಂ-ಎಸ್.ಎಸ್.ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ರೈಲನ್ನು 08.10.23 ರಿಂದ 31.12.23 ರವರೆಗೆ ಮುಂದುವರಿಸಲಾಗುತ್ತಿದೆ. ಈ ಮೊದಲು 01.10.2023 ರವರೆಗೆ ಓಡಿಸಲು ಸೂಚಿಸಲಾಗಿತ್ತು.

    II. ಹೂಡಿ ನಿಲ್ದಾಣ: ನಿಲುಗಡೆ ಮುಂದುವರಿಕೆ

    ರೈಲುಗಳ ಸಂಖ್ಯೆ 16519/16520 ಕೆ.ಎಸ್.ಆರ್ ಬೆಂಗಳೂರು-ಜೋಲಾರಪೇಟೆ-ಕೆ.ಎಸ್.ಆರ್ ಬೆಂಗಳೂರು ಮೆಮು ರೈಲುಗಳಿಗೆ, ಹೂಡಿ ಹಾಲ್ಟ್ ನಿಲ್ದಾಣದಲ್ಲಿನ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಅಕ್ಟೋಬರ್ 1 ರಿಂದ ಮಾರ್ಚ್ 30, 2024 ರವರೆಗೆ ಮುಂದುವರಿಸಲಾಗುತ್ತಿದೆ.

    III. ರೈಲು ಮಾರ್ಗ ಬದಲಾವಣೆ

    1. ವಿಜಯವಾಡ ವಿಭಾಗದ ರೋಲಿಂಗ್ ಕಾರಿಡಾರ ಕಾಮಗಾರಿ ಸಲುವಾಗಿ ಸೆಪ್ಟೆಂಬರ್‌ 28 ರಂದು ಟಾಟಾನಗರದಿಂದ ಹೊರಡುವ ರೈಲು ಸಂಖ್ಯೆ 18111 ಟಾಟಾನಗರ-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲು ನಿಡದವೊಲು, ಭೀಮಾವರಂ ಟೌನ್, ಗುಡಿವಾಡ, ವಿಜಯವಾಡ ನಿಲ್ದಾಣಗಳ ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ಏಲೂರು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.

    Share Information
    Advertisement
    Click to comment

    You must be logged in to post a comment Login

    Leave a Reply