Connect with us

    KARNATAKA

     ಡೆಮು ರೈಲುಗಳ ರದ್ದತಿ ವಿಸ್ತರಿಸಿದ ರೈಲ್ವೇ ಇಲಾಖೆ..!

    ಮಜೋರ್ಡಾ ಮತ್ತು ವಾಸ್ಕೋ-ಡ-ಗಾಮಾ ನಿಲ್ದಾಣಗಳ ನಡುವೆ ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಸಲುವಾಗಿ ರೈಲುಗಳ ಸಂಖ್ಯೆ 07380/07379 ವಾಸ್ಕೋ-ಡ-ಗಾಮಾ – ಕುಲೆಮ್ – ವಾಸ್ಕೋ-ಡ-ಗಾಮಾ ಡೆಮು ವಿಶೇಷ ರೈಲುಗಳ ರದ್ದತಿಯನ್ನು ನವೆಂಬರ್ 30, 2023 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.

    ಹುಬ್ಬಳ್ಳಿ : ಮಜೋರ್ಡಾ ಮತ್ತು ವಾಸ್ಕೋ-ಡ-ಗಾಮಾ ನಿಲ್ದಾಣಗಳ ನಡುವೆ ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಸಲುವಾಗಿ ರೈಲುಗಳ ಸಂಖ್ಯೆ 07380/07379 ವಾಸ್ಕೋ-ಡ-ಗಾಮಾ – ಕುಲೆಮ್ – ವಾಸ್ಕೋ-ಡ-ಗಾಮಾ ಡೆಮು ವಿಶೇಷ ರೈಲುಗಳ ರದ್ದತಿಯನ್ನು ನವೆಂಬರ್ 30, 2023 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.

    II. ಚೌಮೆಲಾ ನಿಲ್ದಾಣ: ರೈಲುಗಳ ಪ್ರಾಯೋಗಿಕ ನಿಲುಗಡೆ

    ಮೈಸೂರು ಮತ್ತು ಜೈಪುರ ನಿಲ್ದಾಣಗಳ ಮಧ್ಯೆ ಸಂಚರಿಸುತ್ತಿರುವ (ರೈಲುಗಳ ಸಂಖ್ಯೆ 12975/12976) ರೈಲುಗಳನ್ನು ಚೌಮೆಲಾ ನಿಲ್ದಾಣದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಆರು ತಿಂಗಳ ಕಾಲ ಹೆಚ್ಚುವರಿ ನಿಲುಗಡೆಯನ್ನು ಒದಗಿಸಲು ಪಶ್ಚಿಮ ಮಧ್ಯ ರೈಲ್ವೆ ವಲಯವು ಸೂಚಿಸಿದೆ.

    1. ಅಕ್ಟೋಬರ್ 6, 2023 ರಿಂದ ಏಪ್ರಿಲ್ 2, 2024 ರವರೆಗೆ ರೈಲು ಸಂಖ್ಯೆ 12975 ಮೈಸೂರು-ಜೈಪುರ ಎಕ್ಸ್ ಪ್ರೆಸ್ ರೈಲಿಗೆ ಚೌಮೆಲಾ ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆಗೆ ಅವಕಾಶ ನೀಡಲಾಗಿದೆ. ಈ ರೈಲು ಚೌಮೆಲಾ ನಿಲ್ದಾಣಕ್ಕೆ 11:56/11:58 p.m. ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.

    2. ಅಕ್ಟೋಬರ್ 5, 2023 ರಿಂದ ಏಪ್ರಿಲ್ 1, 2024 ರವರೆಗೆ ರೈಲು ಸಂಖ್ಯೆ 12976 ಜೈಪುರ-ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಚೌಮೆಲಾ ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆಗೆ ಅವಕಾಶ ನೀಡಲಾಗಿದೆ. ಈ ರೈಲು ಚೌಮೆಲಾ ನಿಲ್ದಾಣಕ್ಕೆ 01:03/ 01:05 a.m. ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply