LATEST NEWS
ಮಂಗಳೂರು ಏರ್‌ಪೋರ್ಟ್‌ನಲ್ಲಿ ಸ್ಥಳಾಂತರಿಸಲಾಗಿದ್ದ ಪಿಲಿನಲಿಕೆ ಆಕೃತಿ ಮರು ಸ್ಥಾಪನೆ

ಮಂಗಳೂರು ನವೆಂಬರ್ 20: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿಗೆ ಹಸ್ತಾಂತರವಾದ ನಂತರ ತುಳುನಾಡಿನ ಸಂಸ್ಕೃತಿಯ ಪ್ರತಿಬಿಂಬ ಪಿಲಿನಲಿಕೆಯ ಆಕೃತಿ ಜಾಗದಲ್ಲಿ ಅದಾನಿಯವರ ಲಾಂಭನ ತಂದು ಇಡಲಾಗಿತ್ತು. ಈ ಬದಲಾವಣೆ ವಿರುದ್ದ ಕರಾವಳಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೇಸ್ ಮುಖಂಡ ಮಿಥುನ್ ರೈ ಪಿಲಿನಲಿಕೆಯ ಆಕೃತಿಯನ್ನು ಮರುಸ್ಥಾಪನೆ ಮಾಡದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದ ಬೆನ್ನಲೆ ಮತ್ತೆ ಮೂಲ ಸ್ಥಾನಕ್ಕೆ ಪಿಲಿನಲಿಕೆ ಆಕೃತಿ ಬಂದಿದೆ.
ಅದಾನಿ ಗ್ರೂಫ್ ಗೆ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಸ್ತಾಂತರವಾದ ನಂತರ ವಿಮಾನ ನಿಲ್ದಾಣದ ನಾಮಫಲಕ ಸೇರಿದಂತೆ ಎಲ್ಲವನ್ನೂ ಬದಲಾಯಿಸಲಾಗಿತ್ತು. ವಿಮಾನ ನಿಲ್ದಾಣದ ಒಳಗೆ ಇದ್ದ ತುಳುನಾಡ ಸಂಸ್ಕೃತಿಯ ಪ್ರತಿಬಿಂಬ ಪಿಲಿನಲಿಕೆಯ ಆಕೃತಿ ಇದ್ದು ಈಗ ಅದಾನಿಯವರ ಲಾಂಭನ ತಂದು ತುಳುನಾಡಿನ ಸಂಸ್ಕೃತಿಯನ್ನು ವಿಮಾನ ನಿಲ್ದಾಣದ ಒಳಗಡೆ ಕೂಡಾ ನಶಿಸುವಂತ ಪ್ರಯತ್ನ ಮಾಡಲಾಗಿತ್ತು. ಈ ಬದಲಾವಣೆ ವಿರುದ್ದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ಜನರ ಆಕ್ರೋಶಕ್ಕೆ ಮಣಿದ ಅದಾನಿ ಗ್ರೂಫ್ ಕೂಡಲೇ ಮೂಲ ಸ್ಥಾನಕ್ಕೆ ಸ್ಥಳಾಂತರಗೊಂಡ ಪಿಲಿನಲಿಕೆ ಆಕೃತಿಯನ್ನು ಸ್ಥಳಾಂತರಿಸಿದ್ದಾರೆ.
