Connect with us

LATEST NEWS

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ – 6 ಮಕ್ಕಳು ಸೇರಿ 14 ಮಂದಿ ಸಾವು

ಉತ್ತರ ಪ್ರದೇಶ ನವೆಂಬರ್ 20: ಉತ್ತರ ಪ್ರದೇಶದ ಪ್ರತಾಪ್ ಗಡೆ ಎಂಬಲ್ಲಿ ಟ್ರಕ್ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಕ್ಕಳು ಸೇರಿ 14 ಮಂದಿ ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ನಡೆದಿದೆ.


ಗುರುವಾರ ರಾತ್ರಿ 11.45ರ ಸುಮಾರಿಗೆ ಈ ಅಪಘಾತ ನಡೆದಿದ್ದು, ಪ್ರಯಾಗ್ ರಾಜ್- ಲಕ್ನೋ ಹೆದ್ದಾರಿಯ ದೇಶರಾಜ್ ಇನಾರ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಟ್ರಕ್ ನ ಟಯರ್ ಪಂಕ್ಷರ್ ಆದ ಕಾರಣ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿತ್ತು. ಈ ವೇಳೆ ವೇಗದಿಂದ ಬಂದ ಕಾರು ಟ್ರಕ್ ಗೆ ಗುದ್ದಿದೆ. ಪರಿಣಾಮ ಕಾರಿನ ಅರ್ಧ ಭಾಗ ಟ್ರಕ್ ನ ಒಳಗೆ ಸಿಲುಕಿಕೊಂಡಿತ್ತು.


ಕಾರಿನಲ್ಲಿದ್ದವರು ಸಂಬಂಧಿಕರ ಮದುವೆ ಸಮಾರಂಭದಿಂದ ತಮ್ಮ ಗ್ರಾಮಕ್ಕೆ ಮರಳಿ ಬರುತ್ತಿದ್ದರು. ಮೃತಪಟ್ಟವರಲ್ಲಿ 6 ಮಕ್ಕಳು ಸೇರಿದ್ದಾರೆ. ಕಾರಿನಲ್ಲಿದ್ದ ಎಲ್ಲಾ 14 ಮಂದಿ ಮೃತಪಟ್ಟಿದ್ದಾರೆ

Facebook Comments

comments