LATEST NEWS
ಹಿರಿಯಡ್ಕ – ಪಿಕಪ್ ಮತ್ತು ಖಾಸಗಿ ಬಸ್ ಡಿಕ್ಕಿ – ಓರ್ವ ಸಾವು

ಉಡುಪಿ ಎಪ್ರಿಲ್ 14: ಪಿಕಪ್ ಮತ್ತು ಖಾಸಗಿ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪಿಕಪ್ ಸಹಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ಹಿರಿಯಡಕ ಗಂಪ ಕ್ರಾಸ್ ಬಳಿ ನಡೆದಿದೆ.
ಕಾರ್ಕಳದಿಂದ ಉಡುಪಿಗೆ ಹೋಗುತ್ತಿರುವ ಪಿಕಪ್ ಹಾಗೂ ಉಡುಪಿಯಿಂದ ಕಾರ್ಕಳಕ್ಕೆ ಹೋಗುತ್ತಿರುವ ಖಾಸಗಿ ಬಸ್ ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಪಿಕಪ್ ಎರಡು ತುಂಡಾಗಿದೆ. ಪಿಕಪ್ ನಲ್ಲಿದ್ದ ಸಹಸವಾರ ಸಾವನಪ್ಪಿದರೆ, ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
