LATEST NEWS
ಮೃತ ವ್ಯಕ್ತಿಯ ಮೇಲೆ ಛಾಯಾಗ್ರಾಹಕನ ವಿಕೃತಿ, ವೀಡಿಯೋ ವೈರಲ್
ಅಸ್ಸಾಂ, ಸೆಪ್ಟೆಂಬರ್ 24: ಛಾಯಾಗ್ರಾಹಕನೊಬ್ಬ ಮೃತ ವ್ಯಕ್ತಿಯ ದೇಹದ ಮೇಲೆ ದಾಳಿ ನಡೆಸಿ ವಿಕೃತ ಮೆರೆದಿರುವ ವಿಡಿಯೋ ದೇಶದಾದ್ಯಂತ ವೈರಲ್ ಆಗಿದ್ದು ಆತನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಸ್ಸಾಂನ ಸಿಪಾಜಾರ್ ಭಾಗದಲ್ಲಿ ಸ್ಥಳೀಯ ಜನರನ್ನು ಒಕ್ಕಲೆಬ್ಬಿಸಿ ಅವರ ಮನೆಗಳನ್ನು ಖಾಲಿ ಮಾಡಿಸಲು ಪೊಲೀಸರು ಶಸ್ತ್ರಸಜ್ಜಿತರಾಗಿ ತೆರಳಿದ್ದರು. ಈ ವೇಳೆ ಜೊತೆಗೆ ಛಾಯಾ ಗ್ರಾಹಕನೂ ತೆರಳಿದ್ದಾನೆ. ಪೊಲೀಸರ ದಾಳಿಯನ್ನು ವರ್ತನೆಯನ್ನು ಈ ವೇಳೆ ಸ್ಥಳೀಯ ಜನ ಖಂಡಿಸಿ ಪ್ರತಿಭಟಿಸಿದ್ದಾರೆ.
ಆದರೆ ಈ ವೇಳೆ ಗನ್ ಮತ್ತು ಲಾಠಿ ಹಿಡಿದು ಶಸ್ತ್ರಸಜ್ಜಿತರಾಗಿ, ಗಲಭೆ ವಿರೋಧಿಸಿರುವ ಪೊಲೀಸರ ಗುಂಪನ್ನು, ಕೈಯ್ಯಲ್ಲಿ ಕೋಲು ಹಿಡಿದುಕೊಂಡು ಅಟ್ಟಿಸಿಕೊಂಡು ಬಂದ ವ್ಯಕ್ತಿಯೊಬ್ಬರನ್ನು ಪೊಲೀಸರು ಗುಂಡು ಹಾರಿಸಿ ಕ್ರೂರವಾಗಿ ಕೊಂದಿದ್ದಾರೆ.
What protocol orders firing to the chest of a lone man coming running with a stick @DGPAssamPolice @assampolice ? Who is the man in civil clothes with a camera who repeatedly jumps with bloodthirsty hate on the body of the fallen (probably dead) man? pic.twitter.com/gqt9pMbXDq
— Kavita Krishnan (@kavita_krishnan) September 23, 2021
ಈ ಅಮಾನವೀಯ ದಾಳಿಯ ಜೊತೆಗೆ ಛಾಯಾಗ್ರಾಹಕನೊಬ್ಬ ಮೃತ ವ್ಯಕ್ತಿಯ ದೇಹದ ಮೇಲೆ ದಾಳಿ ನಡೆಸಿ ವಿಕೃತ ಮೆರೆದಿರುವ ವಿಡಿಯೋ ದೇಶದಾದ್ಯಂತ ವೈರಲ್ ಆಗಿದ್ದು ಆತನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯ ಮೇಲೆ ದಾಳಿ ಮಾಡಿ ವಿಕೃತ ಮೆರೆದ ಛಾಯಾಗ್ರಾಹಕನನ್ನು ಬಿಜೋಯ್ ಬೋನಿಯಾ ಎಂದು ಗುರುತಿಸಲಾಗಿದ್ದು, ಅಸ್ಸಾಂ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟ್ ಆತನ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.