LATEST NEWS
ತಾಜ್‌ಮಹಲ್‌ನ ಮುಚ್ಚಿರುವ ಕೋಣೆಗಳ ಪೋಟೋ ಬಿಡುಗಡೆ
ನವದೆಹಲಿ, ಮೇ 17: ವಿಶ್ವವಿಖ್ಯಾತ ಆಗ್ರಾದ ತಾಜ್‌ಮಹಲ್‌ನಲ್ಲಿ ಮುಚ್ಚಿರುವ 22 ಕೋಣೆಗಳನ್ನು ತೆರೆಯಬೇಕೆನ್ನುವ ಅರ್ಜಿಯೊಂದು ಅಲಹಾಬಾದ್ ನ್ಯಾಯಾಲಯದ ಮೆಟ್ಟಿಲೇರಿ ಸುದ್ದಿ ಮಾಡಿದ ಬೆನ್ನಲ್ಲೇ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ) ಆ ಕೋಣೆಗಳ ಫೋಟೋಗಳನ್ನು ಬಿಡುಗಡೆ ಮಾಡಿದೆ.
ಮುಚ್ಚಿದ್ದ ಕೋಣೆಗಳಲ್ಲಿ ಈ ಹಿಂದೆ ಮಾಡಲಾದ ಕಾಮಗಾರಿಯ ಫೋಟೋಗಳನ್ನು ಜನವರಿ 2022 ರಲ್ಲಿ ಫೋಟೋಗಳು ಪ್ರಸಾರ ಮಾಡಲಾಗಿದ್ದು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿವೆ ಎಂದು ಆಗ್ರಾ ಎಎಸ್‌ಐ ಮುಖ್ಯಸ್ಥ ಆರ್‌ಕೆ ಪಟೇಲ್ ತಿಳಿಸಿದ್ದಾರೆ. ಈ ಪೋಟೋಗಳಲ್ಲಿ ಅದರಲ್ಲಿ ಅಲ್ಲಿನ ಗೋಡೆಗಳು ಕಾಮಗಾರಿಗೂ ಮೊದಲು ಮತ್ತು ನಂತರ ಹೇಗೆ ಕಾಣಿಸುತ್ತಿದ್ದವು ಎನ್ನುವುದನ್ನು ವಿವರಿಸುವ ನಾಲ್ಕು ಫೋಟೋಗಳಿವೆ.
ಪ್ಲಾಸ್ಟರಿಂಗ್ ಮತ್ತು ಪೇಂಟಿಂಗ್ ಕೆಲಸ ಮಾಡಿರುವುದನ್ನು ಫೋಟೋಗಳಲ್ಲಿ ಗಮನಿಸಬಹುದು. ಈ ಕೊಠಡಿಗಳಲ್ಲಿ ಯಾವುದೇ ರಹಸ್ಯಗಳಿಲ್ಲ ಎಂದು ಈ ಹಿಂದೆಯೇ ಎಎಸ್‌ಐ ಅಧಿಕಾರಿಗಳು ಕೋರ್ಟ್‌ಗೆ ಮಾಹಿತಿ ನೀಡಿದ್ದರು. ಸ್ಮಾರಕಗಳನ್ನು ಸಂರಕ್ಷಿಸುವುದು ಎಎಸ್‌ಐ ಯ ಪ್ರಮುಖ ಕರ್ತವ್ಯವಾಗಿದೆ.
ಅಯೋಧ್ಯೆಯ ಬಿಜೆಪಿ ನಾಯಕ ಡಾ.ರಜನೀಶ್ ಸಿಂಗ್ ಅವರು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದಲ್ಲಿ ತಾಜ್ ಮಹಲ್‌ನಲ್ಲಿರುವ ಒಟ್ಟು 22 ಮುಚ್ಚಿದ ಕೊಠಡಿಗಳನ್ನು ಬಾಗಿಲುಗಳನ್ನು ತೆರೆಯುವಂತೆ ಒತ್ತಾಯಿಸಿ ರಿಟ್ ಅರ್ಜಿ ಸಲ್ಲಿಸಿದ್ದು ಕೋರ್ಟ್ ಈಮನವಿಯನ್ನು ತಳ್ಳಿಹಾಕಿದೆ.