LATEST NEWS
PFI ಸಂಘಟನೆ ನಿಷೇಧ ಸಮರ್ಥಿಸಿದ ಸಿಎಂ ಸಿದ್ದರಾಮಯ್ಯ
PFI ಸಂಘಟನೆ ನಿಷೇಧ ಸಮರ್ಥಿಸಿದ ಸಿಎಂ ಸಿದ್ದರಾಮಯ್ಯ
ಮಂಗಳೂರು ನವೆಂಬರ್ 12: ಬಿ ಎಸ್ ಯಡಿಯೂರಪ್ಪ ಮಾಡಿರುವ ಹಗರಣಗಳ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಬೆಳ್ತಂಗಡಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ವಿರುದ್ದ ಗುಡುಗಿದ್ದಾರೆ.
ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿರುವ ವ್ಯಕ್ತಿ, ನನ್ನ ಮೇಲೆ ಯಾವುದೇ ಹಗರಣಗಳು ಇಲ್ಲ. ಯಡಿಯೂರಪ್ಪ ಮೇಲೆ FIR ಇದೆ ಎಂದು ತಿರುಗೇಟು ನೀಡಿದ್ದಾರೆ. PFI ಸಂಘಟನೆಯನ್ನು ಬ್ಯಾನ್ ಮಾಡ್ತೀವಿ ಎಂಬ ದಿನೇಶ್ ಗುಂಡೂರಾವ್ ಹೇಳಿಕೆಯನ್ನು ಸಮರ್ಥಿಸಿರುವ ಸಿಎಂ PFI ಗೆ ಸರ್ಕಾರದ ಬೆಂಬಲ ಇಲ್ಲ. ಮತೀಯ ಸಂಘಟನೆಗಳನ್ನು ವಿರೋಧಿಸೋದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ