Connect with us

LATEST NEWS

ಕೇರಳದಲ್ಲಿ ಮತ್ತೊರ್ವ ಆರ್ ಎಸ್ ಎಸ್ ಕಾರ್ಯಕರ್ತನ ಭೀಕರ ಹತ್ಯೆ

ಕೇರಳದಲ್ಲಿ ಮತ್ತೊರ್ವ ಆರ್ ಎಸ್ ಎಸ್ ಕಾರ್ಯಕರ್ತನ ಭೀಕರ ಹತ್ಯೆ

ಕೇರಳ ನವೆಂಬರ್ 12: ಕೇರಳದ ತ್ರಿಶೂರ್ ನಲ್ಲಿ ಮತ್ತೋರ್ವ ಆರ್ ಎಸ್ ಎಸ್ ಕಾರ್ಯಕರ್ತನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಮೃತ ಆರ್ಎಸ್ಎಸ್ ಕಾರ್ಯಕರ್ತ 28 ವರ್ಷದ ಆನಂದ್ ಸಿಪಿಎಂ ಕಾರ್ಯಕರ್ತನ ಹತ್ಯೆಯ ಆರೋಪಿಯಾಗಿದ್ದು ಬೇಲ್ ಮೇಲೆ ಹೊರಗಡೆ ಬಂದಿದ್ದು ಇಂದು ತನ್ನ ಬೈಕ್ ನಲ್ಲಿ ಆನಂದ್ ಹೋಗುತ್ತಿದ್ದಾಗ ಕಾರಿನಿಂದ ಗುದ್ದಿ ಕೆಳಗೆ ಬಿದ್ದ ಆನಂದ್ ಮೇಲೆ ಆರು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಅನಂತುರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

Facebook Comments

comments