Connect with us

KARNATAKA

ಪಿ ಎಫ್ ಐ ಮೇಲೆ ಕೇಂದ್ರ ಸರ್ಕಾರದ ಕೆಂಗಣ್ಣು!, 5 ವರ್ಷಗಳ ಕಾಲ ನಿಷೇಧ

ದೆಹಲಿ, ಸೆಪ್ಟೆಂಬರ್28: ದೇಶಾದ್ಯಂತ ಕಳೆದ 2 ವಾರಗಳ ಕಾಲ ಪಿಎಫ್‌ಐ ಸಂಘಟನೆ ಮೇಲೆ ರೇಡ್‌ಗಳು ನಡೆದ ಬೆನ್ನಲ್ಲೇ ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆ ಬ್ಯಾನ್‌ ಮಾಡಿದೆ. ಯುಎಪಿಎ ಕಾಯ್ದೆಯಡಿ 5 ವರ್ಷಗಳ ಕಾಲ ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯನ್ನು ದೇಶಾದ್ಯಂತ ಬ್ಯಾನ್ ಮಾಡಿದೆ. ದೇಶಾದ್ಯಂತ ನಡೆದ ರೇಡ್‌ಗಳಲ್ಲಿ ನೂರಾರು ಪಿಎಫ್‌ಐ ನಾಯಕರು, ಕಾರ್ಯಕರ್ತರನ್ನು ಬಂಧಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ‌ ನಿರ್ಧಾರ ಕೈಗೊಂಡಿದೆ.

ಕೇಂದ್ರ ಸರ್ಕಾರವು PFI (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಮತ್ತು ಅದರ ಸಹವರ್ತಿಗಳು ಅಥವಾ ಅಂಗಸಂಸ್ಥೆಗಳನ್ನು  ಐದು ವರ್ಷಗಳ ಅವಧಿಗೆ ಕಾನೂನುಬಾಹಿರ ಸಂಘ ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಘೋಷಿಸುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದೆ.

ಕೇಂದ್ರ ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI), ರಿಹಾಬ್‌ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ಕೇರಲದ ರಿಹಾಬ್‌ ಫೌಂಡೇಶನ್‌ ಸೇರಿದಂತೆ ಅದರ ಸಹವರ್ತಿಗಳು ಅಥವಾ ಅಂಗಸಂಸ್ಥೆಗಳು ಅಥವಾ ಫ್ರಂಟ್‌ಗಳನ್ನು “ಕಾನೂನುಬಾಹಿರ ಸಂಘಗಳು” ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯಪತ್ರದ ಮೂಲಕ ಆದೇಶ ಹೊರಡಿಸಿದೆ.

ಬ್ಯಾನ್‌ ಯಾಕೆ..?
ಇಸ್ಲಾಂ ಸಂಘಟನೆಯ ವಿರುದ್ಧ ದೇಶದ  ಹಲವು ರಾಜ್ಯಗಳಲ್ಲಿ ಎನ್‌ಐಎ ರೇಡ್‌ ನಡೆಸಿತ್ತು. ಅಲ್ಲದೆ, PFI ಯೊಂದಿಗೆ ಸಂಬಂಧ ಹೊಂದಿರುವ 200 ಕ್ಕೂ ಹೆಚ್ಚು ಜನರನ್ನು ಬಂಧಿಸಿದ ನಂತರ ಕೇಂದ್ರ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ. ಉತ್ತರ ಪ್ರದೇಶ, ಕರ್ನಾಟಕ, ಗುಜರಾತ್, ದೆಹಲಿ, ಮಹಾರಾಷ್ಟ್ರ, ಅಸ್ಸಾಂ ಮತ್ತು ಮಧ್ಯಪ್ರದೇಶದಲ್ಲಿ ರಾತ್ರೋರಾತ್ರಿ ಹಲವರನ್ನು ಬಂಧಿಸಲಾಗಿತ್ತು. ಇದಕ್ಕೂ ಮುನ್ನ, ಸೆಪ್ಟೆಂಬರ್ 22 ರಂದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನೇತೃತ್ವದ ಬಹು-ಏಜೆನ್ಸಿ ತಂಡಗಳು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸಿದ ಆರೋಪದ ಮೇಲೆ 15 ರಾಜ್ಯಗಳಲ್ಲಿ PFI ನ 106 ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಿದವು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *