LATEST NEWS
ಅ.13 ರ ಪೆಟ್ರೋಲ್ ಪಂಪ್ ಮಾಲೀಕರ ಮುಷ್ಕರ ಹಿಂತೆಗೆತ

ಅ.13 ರ ಪೆಟ್ರೋಲ್ ಪಂಪ್ ಮಾಲೀಕರ ಮುಷ್ಕರ ಹಿಂತೆಗೆತ
ಬೆಂಗಳೂರು, ಅಕ್ಟೋಬರ್ 12 : ವಿವಿಧ ಬೇಡಿಕೆಗಳನ್ನುಮುಂದಿಟ್ಟು ಪೆಟ್ರೋಲ್ ಪಂಪ್ ಮಾಲಿಕರು ಅಕ್ಟೋಬರ್ 12 ರ ಮಧ್ಯ ರಾತ್ರಿಯಿಂದ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ತೈಲ ವರ್ತಕರು ಹಿಂಪಡೆದಿದ್ದಾರೆ.
ಪೆಟ್ರೋಲಿಯಂ ಸಚಿವರ ಮನವಿ ಮೇರೆಗೆ ಮುಷ್ಕರವನ್ನು ಹಿಂಪಡೆದಿರುವುದಾಗಿ ಅಖಿಲ ಕರ್ನಾಟಕ ಪೆಟ್ರೊಲಿಯಂ ವಿತರಕರ ಸಂಘ ಹೇಳಿಕೆ ನೀಡಿದೆ. ಏಕ ರೂಪ ತೈಲ ದರದ ಜಿ ಎಸ್ ಟಿ ವಿಚಾರಕ್ಕೆ ಸಂಬಂಧಿದಂತೆ ಈ ವಿಚಾರವು ಜಿ ಎಸ್ ಟಿ ಕೌನ್ಸಿಲ್ ಮುಂದೆ ಇದ್ದು, ಇತರ ಬೇಡಿಕೆಗಳನ್ನು ದೀಪಾವಳಿ ಹಬ್ಬದ ಬಳಿಕ ಇತ್ಯರ್ಥ ಮಾಡುವ ಭರವಸೆಯನ್ನು ಪೆಟ್ರೋಲಿಯಂ ಸಚಿವರು ನೀಡಿದ್ದು, ಈ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂಪಡೆದಿರುವುದಾಗಿ ಹೇಳಿಕೆಯಲ್ಲಿ ವಿವರಿಸಲಾಗಿದೆ. ಆದ್ದರಿಂದ ಅಕ್ಟೋಬರ್ 13 ರಿಂದ ಪೆಟ್ರೋಲ್ ಪಂಪ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
ಪಂಪ್ ಮಾಲೀಕರ ಕಮಿಷನ್ ಮೊತ್ತವನ್ನು ಪರಿಷ್ಕರಿಸುವ ಕುರಿತ ನ್ಯಾಯಮೂರ್ತಿ ಅಪೂರ್ವಚಂದ್ರ ಸಮಿತಿಯ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೆಟ್ರೋಲ್ ಪಂಪ್ ಮಾಲಿಕರು ಅಕ್ಟೋಬರ್ 12 ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು.
ರಾಷ್ಟ್ರದಾದ್ಯಂತ ಬಂದ್‌ಗೆ ಕರೆ ನೀಡಲಾಗಿತ್ತು. ಇದಕ್ಕೆ ರಾಜ್ಯದ ಪೆಟ್ರೋಲ್ ಬಂಕ್ ಮಾಲೀಕರೂ ಬೆಂಬಲ ವ್ಯಕ್ತಪಡಿಸಿದ್ದರು.ಅಖಿಲ ಕರ್ನಾಟಕ ಪೆಟ್ರೊಲಿಯಂ ವಿತರಕರ ಸಂಘ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿತ್ತು. .
ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ GST ವ್ಯಾಪ್ತಿಗೆ ತರಬೇಕು. ದೇಶದಲ್ಲಿ ಉತ್ಪನ್ನಗಳ ಬೆಲೆಯಲ್ಲಿ ಏಕರೂಪತೆ ತರಬೇಕು.
ಇಂಧನ ಬೆಲೆ ಪ್ರತಿನಿತ್ಯ ಪರಿಷ್ಕರಣೆ ಅವೈಜ್ಞಾನಿಕವಾಗಿದ್ದು, ಇದನ್ನು ರದ್ದು ಮಾಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಬಂಕ್ ಮಾಲಿಕರು ಇಟ್ಟಿದ್ದರು.
Continue Reading