LATEST NEWS
ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕನ ವಾಹನದಲ್ಲಿ ಗಾಂಜಾ ಪತ್ತೆ
ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕನ ವಾಹನದಲ್ಲಿ ಗಾಂಜಾ ಪತ್ತೆ
ಮಂಗಳೂರು, ಅಕ್ಟೋಬರ್ 12 :ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕನ ವಾಹನದಲ್ಲಿ ಗಾಂಜಾ ಪತ್ತೆಯಾಗಿದೆ. ವೇಗವಾಗಿ ಬಂದ ಲಾರಿ ಹರಿದು ಯುವಕನೋರ್ವ ದಾರುಣವಾಗಿ ಮೃತ ಪಟ್ಟ ದುರ್ಘಟನೆ ಮಂಗಳೂರು ನಗರದ ಉಳ್ಳಾಲ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಉಳ್ಳಾಲದ ತೊಕ್ಕೊಟ್ಟುವಿನ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಮೃತನನ್ನು ಕೆಸಿ ರೋಡಿನ 30 ವರ್ಷದ ಸಲೀಂ ಎಂದು ಗುರುತ್ತಿಸಲಾಗಿದೆ. ಮೂಲತ ಬೆಳ್ತಂಗಡಿಯವರಾದ ಸಲೀಂ ಅವರು ಕೆ ಸಿ ರೋಡಿನಲ್ಲಿ ವಾಸವಾಗಿದ್ದರು.
ಸಲೀಂ ದ್ವಿಚಕ್ರ ವಾಹನದ ಸೈಡ್ ಸ್ಟ್ಯಾಂಡ್ ಹಾಕಿ ವಾಹನ ಚಲಾಯಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಆಶ್ಚರ್ಯಕರ ಸಂಗತಿ ಎಂದರೆ ಮೃತನ ದ್ವಿಚಕ್ರ ವಾಹನದಲ್ಲಿ ಎರಡು ಪ್ಯಾಕೆಟ್ ಗಾಂಜ ಪತ್ತೆಯಾಗಿದೆ.
ಇದು ಉಳ್ಳಾಲ ಪರಿಸರದಲ್ಲಿನ ಗಾಂಜಾ ಹಾವಳಿಯ ತೀವೃತೆಯನ್ನು ತೋರಿಸುತ್ತಿದೆ. ಉಳ್ಳಾಲ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
Facebook Comments
You may like
ಆನೆಗೆ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಆನೆ ಸಾವು
ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.
ಪೂಜೆಯಲ್ಲಿ ಪಾಲ್ಗೊಂಡಿದ್ದ ಮೊಯ್ದಿನ್ ಬಾವಾರಿಗೆ ಜೀವ ಬೆದರಿಕೆ…!
ಧರ್ಮಬೋಧಕನಿಂದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ
ಕಾಳಿದೇವಿಯ ಮಂತ್ರ ಪಠಣ ಪ್ರಯೋಜನ.
ಶ್ರೀ ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿ ಫಲಾಫಲವನ್ನು ತಿಳಿಯೋಣ.
You must be logged in to post a comment Login