ಬೆಂಗಳೂರು, ಅಕ್ಟೋಬರ್ 10: ಅಕ್ಟೋಬರ್ 12 ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಪಂಪ್ ಬಂದ್ ಆಗಲಿವೆ.
ಪೆಟ್ರೋಲ್ ಪಂಪ್ ಮಾಲೀಕರ ಕಮಿಷನ್ ಮೊತ್ತವನ್ನು ಪರಿಷ್ಕರಿಸುವ ಕುರಿತ ನ್ಯಾಯಮೂರ್ತಿ ಅಪೂರ್ವಚಂದ್ರ ಸಮಿತಿಯ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೆಟ್ರೋಲ್ ಪಂಪ್ ಮಾಲಿಕರು ಅಕ್ಟೋಬರ್ 12 ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ರಾಷ್ಟ್ರದಾದ್ಯಂತ ಬಂದ್‌ಗೆ ಕರೆ ನೀಡಲಾಗಿದೆ. ಇದಕ್ಕೆ ರಾಜ್ಯದ ಪೆಟ್ರೋಲ್ ಬಂಕ್ ಮಾಲೀಕರೂ ಬೆಂಬಲ ವ್ಯಕ್ತಪಡಿಸಿದ್ದಾರೆ.ಅಖಿಲ ಕರ್ನಾಟಕ ಪೆಟ್ರೊಲಿಯಂ ವಿತರಕರ ಸಂಘ ಬಂದ್ ಗೆ ಸಂಪೂರ್ಣ ಬೆಂಲ ನೀಡಿದೆ. ಈ ಹಿನ್ನೆಲೆರಯಲ್ಲಿ ರಾಜ್ಯದ 4,000 ಬಂಕ್‌ಗಳು ಸೇರಿ ದೇಶದ 54 ಸಾವಿರ ಬಂಕ್‌ಗಳು ಬಂದ್ ಆಚರಿಸಲಿವೆ.
ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ GST ವ್ಯಾಪ್ತಿಗೆ ತರಬೇಕು. ದೇಶದಲ್ಲಿ ಉತ್ಪನ್ನಗಳ ಬೆಲೆಯಲ್ಲಿ ಏಕರೂಪತೆ ತರಬೇಕು.
ಇಂಧನ ಬೆಲೆ ಪ್ರತಿನಿತ್ಯ ಪರಿಷ್ಕರಣೆ ಅವೈಜ್ಞಾನಿಕವಾಗಿದ್ದು, ಇದನ್ನು ರದ್ದು ಮಾಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಬಂಕ್ ಮಾಲಿಕರು ಇಟ್ಟಿದ್ದಾರೆ.