National
ಸತತ ದಾಖಲೆಯ 21ನೇ ದಿನ ಏರಿಕೆಯಾದ ಪೆಟ್ರೋಲ್ ಡಿಸೇಲ್ ಬೆಲೆ
ನವದೆಹಲಿ ಜೂನ್ 27: ಲಾಕ್‌ಡೌನ್ ಸಡಿಲಿಕೆ ಬಳಿಕ ಜೂನ್ 7 ರಿಂದ ಇಂಧನ ದರ ಏರಿಕೆ ಪ್ರಾರಂಭವಾಗಿದ್ದು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತ 21ನೇ ದಿನವೂ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 80.38 ಮತ್ತು ಡೀಸೆಲ್ ದರ 80.40ಕ್ಕೆ ತಲುಪಿದೆ.
ಇಂದು ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ 25 ಪೈಸೆ ಮತ್ತು 21 ಪೈಸೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್‍ಗೆ 82.99 ರೂ. ಇದ್ದರೆ, ಡೀಸೆಲ್ ಬೆಲೆ 76.45 ರೂ. ಆಗಿದೆ. ಮುಂಬೈನಲ್ಲೂ ಪೆಟ್ರೋಲ್ ಬೆಲೆ 87 ರೂ. ಗಡಿ ದಾಟಿದೆ. ಇಂದು ಪ್ರತಿ ಲೀಟರ್ 87.14 ರೂ.ಗೆ ಮಾರಾಟವಾಗುತ್ತಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 82.05 ರೂ. ಹಾಗೂ ಡೀಸೆಲ್ ದರ 75.52 ರೂ. ಇದೆ. ಚೆನ್ನೈನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್‍ಗೆ 83.59 ರೂ. ಇದ್ದರೆ, ಬೆಲೆ 77.44 ರೂ. ಆಗಿದೆ.
ದರ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಇಂಧನ ದರ ಏರಿಕೆ ‘ನ್ಯಾಯಯುತವಲ್ಲ’ ಮತ್ತು ‘ಚಿಂತನೆ ರಹಿತವಾದದ್ದು’. ಕೇಂದ್ರ ಸರ್ಕಾರ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆದು, ಕಚ್ಚಾ ತೈಲ ಬೆಲೆ ಇಳಿಕೆಯ ಲಾಭವನ್ನು ನೇರವಾಗಿ ನಾಗರಿಕರಿಗೆ ತಲುಪಿಸಬೇಕು ಎಂದು ಆಗ್ರಹಿಸಿದೆ.
ದೇಶದಲ್ಲಿ ಲಾಕ್‌ಡೌನ್ ಜಾರಿಯಾಗುವ ಮೊದಲು ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಕ್ರಮವಾಗಿ 69.60 ಮತ್ತು 62.30 ಇತ್ತು. ಲಾಕ್‌ಡೌನ್ ಬಳಿಕ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವ ಸಾರಿಗೆ ಉದ್ಯಮಕ್ಕೆ ಇಂಧನ ದರ ಏರಿಕೆಯಿಂದ ದೊಡ್ಡ ಹೊಡೆತ ಬಿದ್ದಂತಾಗಿದೆ. ಇದರಿಂದಾಗಿ ಸರಕು ಸಾಗಾಣಿಕೆ ವೆಚ್ಚ ಹೆಚ್ಚಳವಾಗಿ ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗಲಿದೆ ಎಂದೂ ಅಂದಾಜಿಸಲಾಗಿದೆ.
Facebook Comments
You may like
ಇಂಧನ ಬೆಲೆ ಇಳಿಸುವವರೆಗೆ ಹಾಲಿನ ದರ ಲೀಟರ್‌ಗೆ 100 ರೂ! ಎನಿದು ಹೊಸ ಪ್ರತಿಭಟನೆ?
ತೈಲ ದರ ಹೆಚ್ಚಾದರೂ ಚಿಂತೆಯಿಲ್ಲ ಎನ್ನುವವರಿಗೆ ಲೀಟರಿಗೆ 1 ಸಾವಿರ ದರ ವಿಧಿಸಿ : ಯು.ಟಿ. ಖಾದರ್
ಮತ್ತೆ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕೆ.. ಫೆಬ್ರವರಿಯಲ್ಲಿ ಇದು 16ನೇ ಬಾರಿ
ಬೆಸಿಗೆಯಲ್ಲಿ ಇಳಿಕೆಯಾಗಲಿದೆಯಂತೆ ಪೆಟ್ರೋಲ್ ಬೆಲೆ – ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಉಡುಪಿಯಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಬೈಸಿಕಲ್ ಏರಿದ ರಾಬರ್ಟ್ ವಾದ್ರಾ
You must be logged in to post a comment Login