LATEST NEWS
ದಿನದಿಂದ ದಿನಕ್ಕೆ ತುಟ್ಟಿಯಾಗುತ್ತಿರುವ ಪೆಟ್ರೋಲ್ ಬೆಲೆ..ಇಂದು ಮತ್ತೆ 70 ಪೈಸೆ ಏರಿಕೆ
ನವದೆಹಲಿ ಫೆಬ್ರವರಿ 10: ಪೆಟ್ರೋಲ್ ಮತ್ತು ಡಿಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಲೆ ಇದ್ದು, ಈಗಾಗಲೇ ಪೆಟ್ರೋಲ್ ಬೆಲೆ 90 ರೂಪಾಯಿ ದಾಟಿ ಮುಂದುವರೆದಿದೆ. ಈ ನಡುವೆ ಇಂಧನ ದರ ಬುಧವಾರ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 70 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್‌ಗೆ 27 ಪೈಸೆ ಹೆಚ್ಚಾಗಿದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹87.60 ಆಗಿದ್ದು, ಡೀಸೆಲ್ ಬೆಲೆ ₹77.73 ಆಗಿದೆ. ಮುಂಬೈಯಲ್ಲಿ ಪೆಟ್ರೋಲ್ ದರ ₹95ರ ಸನಿಹ ತಲುಪಿದೆ. ಇಂದಿನ ಏರಿಕೆಯೊಂದಿಗೆ ₹94.12 ಆಗಿದೆ. ಡೀಸೆಲ್ ದರ ₹84.63 ಆಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹90.53 ಆಗಿದ್ದು, ಡೀಸೆಲ್ ದರ ಪ್ರತಿ ಲೀಟರ್‌ಗೆ 82.40 ಆಗಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಸೋಮವಾರ ಪ್ರತಿ ಬ್ಯಾರಲ್‌ಗೆ 60 ಡಾಲರ್ ತಲುಪಿತ್ತು. ಒಂದು ವೇಳೆ ಕಚ್ಚಾ ತೈಲ ಬೆಲೆ ಹಳೆಯದರವಾದ 150 ಡಾಲರ್ ತಲುಪಿದರೆ ದೇಶದಲ್ಲಿ ಪೆಟ್ರೋಲ್ ಬೆಲೆ ಯಾವ ರೀತಿ ಏರಿಕೆಯಾಗಬಹುದು ಎನ್ನುವುದು ಉಹಿಸಲು ಅಸಾಧ್ಯವಾಗಿದೆ.