KARNATAKA
ಸತತ 20ನೇ ದಿನವೂ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ
ಬೆಂಗಳೂರು ಜೂನ್ 26: ಲಾಕ್ ಡೌನ್ ನಡುವೆ ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ದಾಖಲೆ ಬರೆಯತ್ತಲೇ ಇದ್ದು, ದೇಶದಲ್ಲಿ ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಸತತ 20ನೇ ದಿನವೂ ಏರಿಕೆಯಾಗಿದೆ. ಇದಕ್ಕೆ ಸದ್ಯಕ್ಕೆ ಬ್ರೇಕ್ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಪರಿಣಾಮ ಇದೇ ಮೊದಲ ಬಾರಿಗೆ ಡೀಸೆಲ್ ರೂ.80 ಗಡಿದಾಟಿದೆ. ಇನ್ನು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 0.21 ಪೈಸೆ ಜಾಸ್ತಿಯಾಗಿದೆ.
ಜೂ.25ರಂದು ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 16 ಪೈಸೆ ಏರಿಕೆ ಕಂಡಿದ್ದು, ಡೀಸೆಲ್ ಪ್ರತೀ ಲೀಟರ್‌ಗೆ 14 ಪೈಸೆ ಹೆಚ್ಚಾಗಿದೆ. ಕಳೆದ 19 ದಿಗಳಲ್ಲಿ ಪೆಟ್ರೋಲ್ ದರದಲ್ಲಿ ಒಟ್ಟು 8 ರೂ. 66 ಪೈಸೆ ಏರಿಕೆ ಕಂಡರೆ, ಡೀಸೆಲ್ ದರದಲ್ಲಿ ಒಟ್ಟು 10 ರೂ. 63 ಪೈಸೆ ಏರಿಕೆ ಕಂಡಿದೆ.
ಕಳೆದ ಮೂರು ವಾರಗಳಲ್ಲಿ ಡೀಸೆಲ್ ಪ್ರತಿ ಲೀಟರ್ ಮೇಲೆ ರೂ.10.82 ಹಾಗೂ ಪೆಟ್ರೋಲ್ ರೂ.8.87 ಹೆಚ್ಚಳವಾಗಿದೆ. ಇಂದು ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ.85.59 ಹಾಗೂ ಡೀಸೆಲ್ ಬೆಲೆ ರೂ.76.25 ಆಗಿದೆ.
ಇನ್ನು ಬೆಂಗಳೂರಿನಲ್ಲಿ 17 ಪೈಸೆ ಹೆಚ್ಚಳವಾಗಿದ್ದು ಪೆಟ್ರೋಲ್ ಬೆಲೆ 82.52 ರೂ ಏರಿಕೆಯಾಗಿದೆ. ಇನ್ನು ಡಿಸೆಲ್ 13 ಪೈಸೆ ಹೆಚ್ಚಳವಾಗಿದ್ದು 76.09 ರೂಗೆ ಬಂದು ನಿಂತಿದೆ.