LATEST NEWS
ಮತ್ತೆ ಕಂಬಳ ಹಿಂದೆ ಬಿದ್ದ ಪೆಟಾ, ಕಂಬಳದಲ್ಲಿ ನಡೆದ ಹಿಂಸೆಯ ತನಿಖಾ ವರದಿ ಸುಪ್ರೀಂಕೋರ್ಟ್ ಗೆ ಸಲ್ಲಿಕೆ
ಮತ್ತೆ ಕಂಬಳ ಹಿಂದೆ ಬಿದ್ದ ಪೆಟಾ, ಕಂಬಳದಲ್ಲಿ ನಡೆದ ಹಿಂಸೆಯ ತನಿಖಾ ವರದಿ ಸುಪ್ರೀಂಕೋರ್ಟ್ ಗೆ ಸಲ್ಲಿಕೆ
ಮಂಗಳೂರು ಅಕ್ಟೋಬರ್ 22: ಕರಾವಳಿಯ ಜಾನಪದ ಕ್ರೀಡೆ ಕಂಬಳ ಹಿಂದೆ ಬಿದ್ದಿರುವ ಪೇಟಾ ಈಗ ಮತ್ತೆ ಸುಪ್ರೀಂಕೋರ್ಟ್ ಕದ ತಟ್ಟಿದೆ. ಕಳೆದ ಕಂಬಳ ಋುತುವಿನಲ್ಲಿ ನಡೆದ ಕಂಬಳದಲ್ಲಿ ಹಿಂಸೆ ನಡೆದಿರುವ ಬಗ್ಗೆ ತನಿಖಾ ವರದಿಯನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವುದಾಗಿ ಪೇಟಾ ತಿಳಿಸಿದೆ.
ಪೆಟಾ ಕಳೆದ ವರ್ಷ ಡಿಸೆಂಬರ್ ಮತ್ತು ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ನಡೆದ ಬಾರಾಡಿಬೀಡು, ಮೂಡುಬಿದಿರೆ, ಮಂಗಳೂರು ಮತ್ತು ತಿರುವೈಲ್‌ನಲ್ಲಿ ನಡೆದಿರುವ ಕಂಬಳಗಳಲ್ಲಿ ತಪಾಸಣೆ ಮಾಡಿದ್ದು, ಕೋಣಗಳ ಮೇಲಿನ ಹಿಂಸೆ ಮತ್ತು ಕೌರ್ಯವನ್ನು ತಡೆಯಲು ಕರ್ನಾಟಕದ ಕಂಬಳಗಳು ವಿಫಲವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ಪೆಟಾ ಇಂಡಿಯಾದಿಂದ ತಪಾಸಣೆ ಮಾಡಲಾದ ಎಲ್ಲ 4 ಕಂಬಳಗಳಲ್ಲಿ ಕಂಬಳ ಓಟದ ಸ್ಪರ್ಧೆಗೆ ಅನುವು ಮಾಡಿಕೊಡುವ ರಾಜ್ಯದ ತಿದ್ದುಪಡಿಗಳು ಕೋಣಗಳನ್ನು ಹಿಂಸೆಯಿಂದ ರಕ್ಷಿಸುವಲ್ಲಿ ಎಷ್ಟು ಅನುಪಯುಕ್ತ ಎನ್ನುವುದನ್ನು ಎತ್ತಿ ತೋರಿಸುತ್ತದೆ.
ಪೆಟಾ ದಾಖಲು ಮಾಡಿರುವ ದೂರು ಕರ್ನಾಟಕದ ಹೊಸ ಕಾನೂನಿನ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುತ್ತದೆ ಮತ್ತು ಅದನ್ನು ಕಿತ್ತು ಹಾಕಲು ನಿರ್ದೇಶನವನ್ನು ಕೋರುತ್ತದೆ ಎಂದು ಪೆಟಾದ ಪ್ರಕಟನೆ ತಿಳಿಸಿದೆ.