Connect with us

    LATEST NEWS

    ಪೆರ್ಡೂರು ನಾಪತ್ತೆಯಾದ ಅಪ್ರಾಪ್ತ ಜೋಡಿ ಭಟ್ಕಳದಲ್ಲಿ ಪತ್ತೆ

    ಉಡುಪಿ ನವೆಂಬರ್ 6: ಉಡುಪಿಯಲ್ಲಿ ಸಂಚಲನ ಮೂಡಿಸಿದ್ದ ಅಪ್ರಾಪ್ತ ಬಾಲಕಿ ನಾಪತ್ತೆ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಯುವಜೋಡಿ‌ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೆರ್ಡೂರಿನ ಅಪ್ರಾಪ್ತ ಬಾಲಕಿ ಅನ್ಯಕೋಮಿನ ಅಪ್ರಾಪ್ತ ನೊಂದಿಗೆ ನಾಪತ್ತೆಯಾಗಿದ್ದಳು, ಉಡುಪಿಯ ಹಿರಿಯಡ್ ಠಾಣೆಯಲ್ಲಿ ಹತ್ತು ದಿನಗಳ ಹಿಂದೆ ಈ ಕುರಿತಂತೆ ಪ್ರಕರಣ ದಾಖಲಾಗಿತ್ತು.


    ಲವ್ ಜಿಹಾದ್ ಎಂಬ ಕಾರಣಕ್ಕೆ ಈ ನಾಪತ್ತೆ ಪ್ರಕರಣ ವಿವಾದ ಸೃಷ್ಟಿಸಿದ್ದು, ವಿವಿಧ ಹಿಂದೂ ಪರ ಸಂಘಟನೆಗಳೂ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಈ ಪ್ರಕರಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಯುವಕ ಅನ್ಯಕೋಮಿನವನಾಗಿದ್ದು ಲವ್ ಜಿಹಾದ್ ಆರೋಪ ಕೂಡ ಕೇಳಿಬಂದಿತ್ತು.


    ಈಗ ಭಟ್ಕಳದಲ್ಲಿ ನಾಪತ್ತೆಯಾಗಿದ್ದ ಅಪ್ರಾಪ್ತ ಜೋಡಿ ಪತ್ತೆಯಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ನಡುವೆ ಆರೋಪಿ ಬಾಲಕನ ವಿರುದ್ದ ಕಠಿಣ ಕ್ರಮಕ್ಕೆ ಹಿಂದೂ ಸಂಘಟನೆಗಳ‌ ಒತ್ತಾಯ ಮಾಡಿದ್ದು, ಬಾಲಕನ ಮೇಲೆ ಪೋಕ್ಸೋ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply