Connect with us

LATEST NEWS

ಶಬರಿಮಲೆ ಯಾತ್ರೆಗೆ ಹೊರಡುವ ಮುನ್ನ ಭಕ್ತರಿಗೆ ರಾಜ್ಯಸರಕಾರದಿಂದ ಕೆಲವು ಸೂಚನೆಗಳು…

ಬೆಂಗಳೂರು ನವೆಂಬರ್ 6: ಇನ್ನು ಕೆಲವೆ ದಿನಗಳಲ್ಲಿ ಶಬರಿಮಲೆ ಯಾತ್ರೆ ಪ್ರಾರಂಭವಾಗಲಿದ್ದು, ಕೊರೊನಾ ಸಂಕಷ್ಟ ಕಾಲದಲ್ಲಿ ಈ ಬಾರಿಯ ಶಬರಿ ಮಲೆ ಯಾತ್ರೆಗೆ ಹೊರಡುವ ಕರ್ನಾಟಕದ ಭಕ್ತರಿಗೆ ರಾಜ್ಯ ಮುಜರಾಯಿ ಇಲಾಖೆ ಸುತ್ತೊಲೆ ಬಿಡುಗಡೆ ಮಾಡಿದೆ.
ನವೆಂಬರ್ 16ರಿಂದ ಅಯ್ಯಪ್ಪ ಸ್ವಾಮಿ ಯಾತ್ರೆ ಆರಂಭವಾಗುತ್ತೆ. ಆದರೆ ಕೊರೊನಾ ಹಿನ್ನೆಲೆ ಅದು ಪ್ರತಿ ಬಾರಿ ಇದ್ದಂತೆ ಈ ಬಾರಿ ಇರುವುದಿಲ್ಲ. ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಗೆ ಮುಜರಾಯಿ ಇಲಾಖೆ ಸುತ್ತೊಲೆ ಬಿಡುಗಡೆ ಮಾಡಿದೆ. ಕೇರಳ ಸರ್ಕಾರದ ಆದೇಶದನ್ವಯ, ಕರ್ನಾಟಕ ರಾಜ್ಯದ ಭಕ್ತರಿಗೆ ಕೆಲವು ಸೂಚನೆಗಳನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದೆ.


ಕೊರೊನಾ ಅಟ್ಟಹಾಸ ಮುಂದುವರೆದ ಹಿನ್ನೆಲೆಯಲ್ಲಿ ಈ ಬಾರಿ ಶಬರಿಮಲೆಗೆ ಹೋಗುವ ಭಕ್ತರಿಗೆ ಕೆಲವು ನಿಯಮಗಳನ್ನು ಹಾಕಲಾಗಿದೆ.

ಶಬರಿಮಲೈ ವೆಬ್ ಸೈಟ್​ನಲ್ಲಿ ನೋಂದಣಿ ಮಾಡಿಕೊಂಡವರಿಗಷ್ಟೇ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತೆ. ಹೀಗಾಗಿ ಯಾತ್ರೆಗೆ ತೆರಳುವ ಮುನ್ನ ನೋಂದಣಿ ಮಾಡುವುದು ಕಡ್ಡಾಯ.

ಒಂದು ದಿನಕ್ಕೆ 1 ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ. ವಾರಾಂತ್ಯಕ್ಕೆ ಅದನ್ನು ಎರಡು ಸಾವಿರಕ್ಕೆ ಹೆಚ್ಚಿಸಲಾಗುತ್ತೆ.

ದೇವರ ದರ್ಶನಕ್ಕೂ 48 ಗಂಟೆಯ ಮುನ್ನ ಕೋವಿಡ್ ಟೆಸ್ಟ್ ಮಾಡಿಸುವುದು ಕಡ್ಡಾಯ.

10 ವರ್ಷದೊಳಗಿನ ಹಾಗೂ 60 ವರ್ಷ ಮೇಲ್ಪಟ್ಟ ಭಕ್ತರಿಗೆ ಅವಕಾಶ ಇರುವುದಿಲ್ಲ.

ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್ ಹೊಂದಿರುವವರು ಯಾತ್ರೆಗೆ ಹೋಗುವಾಗ ತೆಗೆದುಕೊಂಡು ಹೋಗಬೇಕು.

ಪಂಪಾನದಿ ಸ್ನಾನ ಇರೋದಿಲ್ಲ

Facebook Comments

comments