Connect with us

LATEST NEWS

ಉಗ್ರರಿಗೆ ಯುದ್ದ ಸ್ವರೂಪದ ಶಾಕ್ ನೀಡಬೇಕು -ಪೇಜಾವರ ಶ್ರೀ

ಉಗ್ರರಿಗೆ ಯುದ್ದ ಸ್ವರೂಪದ ಶಾಕ್ ನೀಡಬೇಕು -ಪೇಜಾವರ ಶ್ರೀ

ಉಡುಪಿ ಫೆಬ್ರವರಿ 15: ಕಾಶ್ಮೀರದಲ್ಲಿ ಅಮಾಯಕ ಯೋಧರ ಸಾವಿಗೆ ಕಾರಣರಾದ ಭಯೋತ್ಪಾದಕರ ಮೇಲೆ ಯುದ್ಧ ಸ್ವರೂಪದ ಶಾಕ್ ನೀಡಬೇಕು. ಆದರೆ ಯುದ್ದ ಮಾಡಬಾರದು ಅದರಿಂದ ಮತ್ತಷ್ಟು ಯೋಧರ ಸಾವಿಗೆ ಕಾರಣವಾಗಬಲ್ಲದು, ಪ್ರತೀಕಾರದ ರೀತಿಯನ್ನು ಕೇಂದ್ರ ಸರಕಾರ ನಿರ್ಧರಿಸಬೇಕೆಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಪೇಜಾವರ ಮಠದಲ್ಲಿ ಮಾತನಾಡಿದ ಅವರು 42 ಯೋಧರ ಸಾವು ಬಹಳ ದುಃಖದ ವಿಷಯ ಇದನ್ನು ಯಾರೂ ಒಪ್ಪತಕ್ಕದ್ದಲ್ಲ, ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ ಸೈನಿಕರಿಗೆ ದೇಶದಲ್ಲಿ ದುಃಖ ವ್ಯಕ್ತವಾಗಿದೆ. ಹುತಾತ್ಮರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ದೇಶಕ್ಕಾಗಿ ಸಮಾಜಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರಿಗೆ ಯೋಗಿಗೆ ಸಿಗುವ ಸದ್ಗತಿ ಪ್ರಾಪ್ತವಾಗುತ್ತದೆ. ಕೇಂದ್ರ ಸರಕಾರ ಯೋಧರ ಸಾವಿಗೆ ಪ್ರತೀಕಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ರಾಮ ಮಂದಿರ ನಿರ್ಮಾಣ ವಿಚಾರ ಕೇಂದ್ರ ಸರ್ಕಾರ ಸಂವಿಧಾನ ಮತ್ತು ಸುಪ್ರೀಂಕೋರ್ಟ್ ಅನ್ನು ಮೀರಿ ಹೋಗುವುದು ಸರಿಯಲ್ಲ ಎಂಬ ವಿಚಾರ ತಾಳಿದೆ ಎಂದು ಹೇಳಿದ ಅವರು ಕೇಂದ್ರ ಸರಕಾರದ ಸುಗ್ರೀವಾಜ್ಞೆಗೆ ನಮ್ಮ ವಕೀಲರದ್ದು ಸಹಮತವಿಲ್ಲ ಎಂದರು. ಕೇಂದ್ರ ಸರಕಾರ ಸುಗ್ರೀವಾಜ್ಞೆ ತಂದರು ಅದು ಹೆಚ್ಚುಕಾಲ ಉಳಿಯಲ್ಲ ಎನ್ನುವುದು ವಕೀಲ ಅಭಿಪ್ರಾಯವಾಗಿದೆ ಎಂದರು.

ಲೋಕಸಭಾ ಚುನಾವಣೆಗೆ ರಾಮಮಂದಿರ ವಿಚಾರ ಇಟ್ಟು ಹೋದರೆ ತಪ್ಪಾಗಲಿದೆ ಎಂಬ ಅಭಿಪ್ರಾಯವು ಕೇಳಿ ಬಂತು. ಕೇಂದ್ರ ಸರಕಾರದಲ್ಲಿ ಯಾವುದೇ ಸರಕಾರ ಬಂದರೂ ರಾಮಮಂದಿರ ನಿರ್ಮಾಣ ಆಗಲೇಬೇಕು, ಅಲ್ಲದೆ ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಹಿಂದೂಗಳ ಪರವಾಗಿದ್ದವರಂತೆ ಕಾಣುತ್ತಿದ್ದಾರೆ ಎಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *