ಧರ್ಮಸ್ಥಳ ಬಾಹುಬಲಿಗೆ ಮಸ್ತಕಾಭಿಷೇಕ ಹೆಗ್ಗಡೆ ಕುಟುಂಬಸ್ಥರಿಂದ 1008 ಕಲಶಗಳ ಮಸ್ತಕಾಭಿಷೇಕ

ಬೆಳ್ತಂಗಡಿ ಫೆಬ್ರವರಿ 16: ಧರ್ಮಸ್ಥಳದ ರತ್ನಗಿರಿಯಲ್ಲಿ ಬಾಹುಬಲಿಗೆ ನಾಲ್ಕನೇ ಮಹಾಮಸ್ತಕಾಭಿಷೇಕ ಇಂದು ಬೆಳಿಗ್ಗೆ 8.45ರ ಮೀನ ಲಗ್ನದಲ್ಲಿ ಆರಂಭವಾಯಿತು. ಆರಂಭದಲ್ಲಿ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಂದ ಜಲಾಭಿಷೇಕ ನಡೆಯಿತು.

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಮತ್ತು ಕುಟುಂಬಸ್ಥರಿಂದ ಭವ್ಯ ಅಗ್ರೋಧಕ ಮೆರವಣಿಗೆ ಬಳಿಕ ಬಾಹುಬಲಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನೆರವೇರಿಸಲಾಯಿತು.

ಜಲಾಭಿಷೇಕ ಮುಗಿದ ಬಳಿಕ ನಾಳಿಕೇರ, ಕಬ್ಬಿನರಸ, ಕ್ಷೀರಭಿಷೇಕ, ಅಕ್ಕಿಹಿಟ್ಟು, ಅರಶಿನ, ಕಷಾಯ ಚತುಷ್ಕೋನ ಅಭಿಷೇಕ, ಚಂದನ, ಅಷ್ಟಗಂಧ ಅಭಿಷೇಕ ನಡೆಯಲಿದೆ. ಬಳಿಕ ಪುಷ್ಪವೃಷ್ಟಿ, ಪೂರ್ಣಕುಂಭ ಅಭಿಷೇಕ ಮಂತ್ರ ನಡೆಯಲಿದೆ.

ಈಗಾಗಲೇ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಕಾರ್ಯಕ್ರಮಗಳು ನಡೆಯುತ್ತಿದ್ದು, ಲಕ್ಷಾಂತರ ಮಂದಿ ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದಾರೆ. ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿದ್ದು, ರತ್ನಗಿರಿಗೆ ಹೋಗಿ ಮಹಾಮಸ್ತಕಾಭಿಷೇಕ ನೋಡಲು ಉಚಿತ ವಾಹನ ಸೌಲಭ್ಯ ಕಲ್ಪಿಸಲಾಗಿದೆ.

VIDEO