Connect with us

LATEST NEWS

ಕಂಚಿ ಶ್ರೀಗಳನ್ನು ಭೇಟಿ ಮಾಡಿ ಕಾಮಾಕ್ಷಿ ದೇವಿಯ ದರ್ಶನ ಪಡೆದ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀ ಶ್ರೀಪಾದರು

ಚೆನ್ನೈ – ತಮಿಳುನಾಡು ಪ್ರವಾಸದಲ್ಲಿರುವ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀ ಶ್ರೀಪಾದರು ಬುಧವಾರ ಸಂಜೆ ಕಂಚಿ ಕ್ಷೇತ್ರಕ್ಕೆ ಭೇಟಿ ಕೊಟ್ಟು ಕಂಚಿ ಶ್ರೀ ವಿಜಯೇಂದ್ರ ಸರಸ್ವತೀ ಸ್ವಾಮೀಜಿಯವರನ್ನು ಭೇಟಿ ನೀಡಿದರು .


ಈ ಸಂದರ್ಭ ಕಂಚಿ ಕ್ಷೇತ್ರಕ್ಕೆ ಶ್ರೀಗಳವರನ್ನು ಸಾಂಪ್ರದಾಯಿಕ ಗೌರವಗಳ ಸಹಿತ ಆತ್ಮೀಯವಾಗಿ ಮಾಡಿಕೊಳ್ಳಲಾಯಿತು. ಶ್ರೀ ಗಳ ಭೇಟಿ ಗೆ ಅತೀವ ಸಂತಸ ವ್ಯಕ್ತಪಡಿಸಿ ಉಭಯ ಮಠಗಳೊಂದಿಗೆ ಮತ್ತು ವಿಶೇಷವಾಗಿ ಎರಡೂ ಮಠಗಳ ಹಿಂದಿನ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಶ್ರೀ ಜಯೇಂದ್ರ ಸರಸ್ವತೀ ಸ್ವಾಮೀಜಿಯವರ ಬಾಂಧವ್ಯವನ್ನು ಸ್ಮರಿಸಿಕೊಂಡರು.


‌ಅಯೋಧ್ಯೆ ರಾಮಮಂದಿರ ನಿರ್ಮಾಣದ ಬಗ್ಗೆ ಉಭಯರೂ ಸಮಾಲೋಚನೆ ನಡೆಸಿ ಮುಂದೆ ನಡೆಯಲಿರುವ ಧನಸಂಗ್ರಹ ಅಭಿಯಾನ ಮತ್ತು ಇತರ ಕಾರ್ಯಗಳಲ್ಲಿ ವಿಶೇಷ ಸಹಕಾರ ಕೊಡಬೇಕೆಂದು ಪೇಜಾವರ ಶ್ರೀಗಳು ವಿಶೇಷ ಮನವಿ ಮಾಡಿಕೊಂಡು ಕಂಚಿ ಮಠದ ಪರವಾಗಿ ಪೇಜಾವರ ಶ್ರೀಗಳನ್ನು ಸನ್ಮಾನಿಸಿ ಅಭಿನಂದಿಸಿದರು. ಪೇಜಾವರ ಶ್ರೀಗಳೂ ಕಂಚಿ ಶ್ರೀಗಳಿಗೆ ಶಾಲು ಫಲ ಪುಷ್ಪ ಅರ್ಪಿಸಿ ಗೌರವಿಸಿದರು .

ಇದಕ್ಕೂ ಮೊದಲು ಪೇಜಾವರ ಶ್ರೀಗಳು ಶಿಷ್ಯರ ಸಹಿತ ವರದರಾಜಸ್ವಾಮಿ , ಕಾಮಾಕ್ಷಿ ದೇವಿಯ ದರ್ಶನ ಪಡೆದು ಲೋಕದ ಒಳಿತಿಗೆ ಮತ್ತು ರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನತಾ ಸಿದ್ಧಿಗಾಗಿ ಪ್ರಾರ್ಥಿಸಿದರು .

Share Information
Continue Reading
Advertisement
Click to comment

Leave a Reply

Your email address will not be published. Required fields are marked *