KARNATAKA
ಪೊರೋಟಾಗೆ ಬಿತ್ತು ಶೇಕಡ 18 ರಷ್ಟು ಜಿಎಸ್ ಟಿ …..!!
ರೋಟಿ ಮತ್ತು ಪರೋಟಾದ ವ್ಯತ್ಯಾಸ ತಿಳಿಸಿದ ಅಥಾರಿಟಿ ಫಾರ್ ಅಡ್ವಾನ್ಸ್ಡ್ ರೂಲಿಂಗ್ (ಎ.ಎ.ಆರ್) ನ ಕರ್ನಾಟಕದ ಪೀಠ
ಬೆಂಗಳೂರು : ರೋಟಿಗೂ ಪರೋಟಾಗೂ ರುಚಿ ಬಿಟ್ಟರೆ ಬೇರೆ ವ್ಯತ್ಯಾಸ ಅಂತ ಕೇಳಿದರೆ ಇನ್ನು ಮುಂದೆ ಜಿಎಸ್ ಟಿ ದರವನ್ನು ಹೇಳಬಹುದು, ಅಥಾರಿಟಿ ಫಾರ್ ಅಡ್ವಾನ್ಸ್ಡ್ ರೂಲಿಂಗ್ (ಎ.ಎ.ಆರ್) ನ ಕರ್ನಾಟಕದ ಪೀಠ ಪರೋಟಾಗಳು ರೋಟಿಗಳಲ್ಲ, ರೋಟಿಗಳಿಗೆ ಶೇ.5 ರಷ್ಟು ಜಿಎಸ್ ಟಿ ವಿಧಿಸುವುದಕ್ಕೆ ಹೋಲಿಸಿದರೆ ಪರೋಟಾಗೆ ಶೇ.18 ರಷ್ಟು ಜಿಎಸ್ ಟಿಯನ್ನು ವಿಧಿಸಬಹುದು ಎಂದಿದೆ.
ರೆಡಿ ಟು ಈಟ್ ಪುಡ್ ಗಲಿಗೆ ಮೊರೆ ಹೋಗಿರುವ ಈಗಿನ ಜನರೇಶನ್ ಗೆ ಇನ್ನು ಮುಂದೆ ಚಪಾತಿ ಅಥವಾ ರೊಟ್ಟಿ ತೆಗೆದುಕೊಂಡ್ರೆ, ಶೇಕಡ 5ರಷ್ಟು ಜಿಎಸ್ಟಿ ವಿಧಿಸಲಾಗುತ್ತೆ. ಒಂದು ವೇಳೆ ಪರೋಟಾ ತಿನ್ನುವ ಮನಸ್ಸು ಮಾಡಿದ್ರೋ ನೀವು 18 ರಷ್ಟು ಜಿಎಸ್ಟಿ ಕಟ್ಟಲೇಬೆಕು. ಜಿಎಸ್ಟಿ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ (ಕರ್ನಾಟಕ ಬೆಂಚ್) ರೊಟ್ಟಿ ಹಾಗೂ ಪರೋಟವನ್ನು ಬೇರೆ ಬೇರೆಯಾಗಿ ವಿಂಗಡಿಸಿ ಪರೋಟಗೆ ಹೆಚ್ಚಿನ ಜಿಎಸ್ಟಿ ವಿಧಿಸಿದೆ.
ಮಾರುಕಟ್ಟೆಗೆ ರೆಡಿ-ಟು-ಕುಕ್ ಪದಾರ್ಥಗಳಾದ, ಇಡ್ಲಿ ಹಾಗೂ ದೋಸೆ ಹಿಟ್ಟು, ಪರೋಟಾ, ಪನ್ನೀರ್ ತಯಾರಿಸುವ ಬೆಂಗಳೂರಿನ ವೈಟ್ಫೀಲ್ಡ್ ಮೂಲದ ಐಡಿ ಫ್ರೆಶ್ ಫುಡ್ ಸಂಸ್ಥೆ ಈ ಬಗ್ಗೆ ಧ್ವನಿ ಎತ್ತಿತ್ತು. ಎಲ್ಲಾ ಗೋಧಿ ಪರೋಟಾ ಹಾಗೂ ಮಲಬಾರ್ ಪರೋಟಾಗಳನ್ನು 1905ರ ಹೆಡ್ಡಿಂಗ್ನಡಿ ಗುರುತಿಸಿದ್ರೆ ಅದು ಕೂಡ ಶೇಕಡಾ 5ರ ಜಿಎಸ್ಟಿ ಅಡಿಯಲ್ಲಿ ಬರಲಿದೆ. ಈ ಬಗ್ಗೆ ಗಮನಹರಿಸುವಂತೆ ಮನವಿಯನ್ನೂ ಮಾಡಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ ಜಿಎಸ್ಟಿಯ 1905ರ ಹೆಡ್ಡಿಂಗ್ನಡಿ ಈಗಾಗಲೇ ತಯಾರಿಸಿರುವ ಅಥವಾ ಸಂಪೂರ್ಣವಾಗಿ ಸಿದ್ಧವಾಗಿರುವ ಆಹಾರ ಪದಾರ್ಥಗಳು ಬರುತ್ವೆ. ಇದರಡಿ ರೊಟ್ಟಿ, ಚಪಾತಿ ಕೂಡ ಬರುತ್ತೆ. ಯಾಕಂದ್ರೆ ಒಮ್ಮೆ ಇದನ್ನು ತಯಾರಿಸಿದ್ರೆ ಯಾವಾಗ ಬೇಕಾದ್ರೂ ಸೇವಿಸಬಹುದಾಗಿದೆ.
ಆದರೆ, ಪರೋಟ, ಸೇವನೆಗೂ ಮೊದಲೇ ನೀವು ಬಿಸಿ ಮಾಡಲೇಬೇಕು. ಹಾಗೆಯೇ ಬಳಸಲು ಸಾಧ್ಯವಿಲ್ಲ. ಹೀಗಾಗಿ ಪರೋಟಾ 1905 ಹೆಡ್ಡಿಂಗ್ನಡಿ ಬರೋದಿಲ್ಲ. ಅಲ್ಲದೇ ಶೆಡ್ಯೂಲ್ 1ರ 99Aಗೂ ಸೇರೋದಿಲ್ಲ. ಹೀಗಾಗಿ ರೊಟ್ಟಿ, ಚಪಾತಿಯ ಗುಂಪಿಗೆ ಪರೋಟಾ ಸೇರೋದಿಲ್ಲ. ಹೀಗಾಗಿ ತೆರಿಗೆಯಲ್ಲಿ ವ್ಯತ್ಯಾಸ ಇದೆ ಅಂತ ಉತ್ತರಿಸಿದೆ. ಸದ್ಯ, ಪರೋಟದ ರೆಡಿ ಪ್ಯಾಕೆಟ್ಗೆ ಶೇಕಡ 18ರಷ್ಟು ಹಾಗೂ ರೊಟ್ಟಿಯ ರೆಡಿ ಪ್ಯಾಕೆಟ್ಗೆ ಶೇಕಡ 5ರಷ್ಟು ತೆರಿಗೆ ಫಿಕ್ಸ್ ಮಾಡಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಎ.ಎ.ಆರ್ ನೀಡಿರುವ ಆದೇಶ ಟ್ರೆಂಡಿಂಗ್ ಆಗಿದ್ದು ಈ ಆದೇಶವನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ದೇಶದಲ್ಲಿರುವ ಎಲ್ಲಾ ಸಮಸ್ಯೆಗಳ ನಡುವೆ ಪರೋಟಾದ ಅಸ್ತಿತ್ವದ ಬಗ್ಗೆ ಚಿಂತೆ ಮಾಡಬೇಕಾಗಿ ಬಂದಿರುವುದು ಅಚ್ಚರಿಯಾಗುತ್ತದೆ. ಭಾರತದ ಯಾವುದಾದರೂ ಜುಗಾಡ್ ಸ್ಕಿಲ್ ಕೈಗೆ ಸಿಕ್ಕಿದರೆ ಈ ಪರಿಸ್ಥಿತಿಯಲ್ಲಿ ಖಂಡಿತವಾಗಿಯೂ ಪರೋಟಾದ ಹೊಸ ತಳಿಯೇ ಹುಟ್ಟಬಹುದು ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.