FILM
ನಮ್ಮ ಹಿಂಬದಿಯನ್ನೇ ಯಾಕೆ ಝೂಮ್ ಮಾಡ್ತಿರಾ ಅಂತದ್ದನ್ನು ನೋಡೆ ಇಲ್ವಾ – ಬಾಲಿವುಡ್ ನಟಿ ನೋರಾ

ಮುಂಬೈ ಎಪ್ರಿಲ್ 23: ಬಾಲಿವುಡ್ ನ ಖ್ಯಾತ ನಟಿ ಪಾಪರಾಜಿಗಳು ಹೆಚ್ಚಾಗಿ ತಮ್ಮ ಹಿಂಬದಿಯ ಪೋಟೋ ವಿಡಿಯೋಗಳನ್ನು ತೆಗೆದು ವೈರಲ್ ಮಾಡುತ್ತಿರುವುದಕ್ಕೆ ಗರಂ ಆಗಿದ್ದಾರೆ.
ನ್ಸೂಸ್ 18 ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಪಾಪರಾಜಿಗಳು ತಾವು ಹೋಗುವ ಜಾಗಕ್ಕೆಲ್ಲಾ ಬರುತ್ತಾರೆ. ಪೋಟೋ ವಿಡಿಯೋ ತೆಗೆಯುತ್ತಾರೆ, ಆದರೆ ಹೆಚ್ಚಾಗಿ ನನ್ನ ಹಿಂಬದಿಯ ಪೋಟೋ ವಿಡಿಯೋಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಎಂದರು.

ಬಹುಶಃ ಅವರು ಅಂಥ ಹಿಂಭಾಗವನ್ನು ನೋಡಿಯೇ ಇಲ್ಲವೇನೋ. ಇದು ನನಗೆ ಮಾತ್ರ ಆಗುತ್ತಿರುವ ಸಮಸ್ಯೆ ಅಲ್ಲ, ಎಲ್ಲಾ ನಟಿಯರಿಗೂ ಅವರು ಹಾಗೆಯೇ ಮಾಡುತ್ತಾರೆ. ಅವರ ಹಿಂಭಾಗವನ್ನೇ ಅವರು ಫೋಕಸ್ ಮಾಡಿಕೊಳ್ಳುವುದಿಲ್ಲ. ಏಕೆಂದರೆ ಅದು ಅವರಿಗೆ ಅಷ್ಟು ಎಗ್ಸೈಟಿಂಗ್ ಅನಿಸಿಲ್ಲವೇನೋ. ನಟಿಯರ ದೇಹದ ಭಾಗಗಳನ್ನು ವಿಡಿಯೋ ಮಾಡಿ ಅನಾವಶ್ಯಕ ವೈರಲ್ ಮಾಡುತ್ತಾರೆ. ಕೆಲವೊಮ್ಮೆ ಜೂಮ್ ಮಾಡೋಕೆ ಏನೂ ಇರುವುದಿಲ್ಲ, ಆದರೂ ಅವರು ಏನನ್ನು ಫೋಕಸ್ ಮಾಡುತ್ತಾರೆ ಗೊತ್ತಿಲ್ಲ’ ಎಂದು ಬೇಸರ ಹೊರಹಾಕಿದ್ದಾರೆ ನೋರಾ.
ಪಾಪರಾಜಿಗಳು ಹಿಂದಿ ಸಿನೆಮಾರಂಗದಲ್ಲಿ ಈಗ ಅವಿಭಾಜ್ಯ ಅಂಗವಾಗಿ ಹೋಗಿದ್ದಾರೆ. ಯಾವುದೇ ನಟ ನಟಿ ಎಲ್ಲೇ ಹೋದರೂ ಅವರ ಹಿಂದೆ ಇರುವ ಇವರು ಪೋಟೋ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾರೆ. ಇದರ ಹಿಂದೆ ಒಂದು ದೊಡ್ಡ ಉದ್ಯಮವೇ ಇದೆ ಎಂದು ಇತ್ತೀಚೆಗೆ ನಟಿ ಪ್ರಿಯಾಮಣಿ ಹೇಳಿದ್ದರು.