LATEST NEWS
ಶ್ರೀರಾಮಮಂದಿರ ವಿವಾದಿತ ಎಂದು ಹೇಳುವ ಜನ ನಾಯಕರು ಚಂಬಲ್ ಕಣಿವೆಯ ಡಕಾಯಿತರಿಗಿಂತಲೂ ಹೆಚ್ಚು ಕಷ್ಟ ನೀಡುತ್ತಿದ್ದಾರೆ – ಪಲಿಮಾರು ಶ್ರೀ
ಉಡುಪಿ ಫೆಬ್ರವರಿ 28: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರವನ್ನು ವಿವಾದಿತ ಕ್ಷೇತ್ರ ಎಂದಿರುವ ಸಿದ್ಧರಾಮಯ್ಯಗೆ ಉಡುಪಿ ಅಷ್ಟಮಠದ ಪಲಿಮಾರು ಶ್ರೀ ಗಳು ತಿರುಗೇಟು ನೀಡಿದ್ದಾರೆ. ಓರ್ವ ವಕೀಲರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನ್ಯಾಯಾಲಯದ ಆದೇಶವನ್ನು ಒಪ್ಪುತ್ತಿಲ್ಲ ಎಂದರೆ ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ನಡೆದ ಕೆ ಕೆ ಮಹಮ್ಮದ್ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈಗಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ಇದೆ ಎನ್ನುವುದಕ್ಕೆ ಬೇಕಾದ ಎಲ್ಲಾ ಸಾಕ್ಷಿಗಳನ್ನು ಭೂಗರ್ಭದಿಂದ ಪಡೆಯಲಾಗಿದೆ. ಕೆ ಕೆ ಮಹಮ್ಮದ್ ಅವರ ನೇತೃತ್ವದಲ್ಲಿ ಉತ್ಖನನ ನಡೆದು ಸಾಕ್ಷಿಗಳು ಕಣ್ಣ ಮುಂದಿವೆ. ಆದರೆ ಕೆಲ ಜನನಾಯಕರು ಮಂದಿರಕ್ಕೆ ಹತ್ತು ರೂಪಾಯಿ ಕೊಡಬೇಕಿದ್ದರೆ, ಭೂಮಿ ವಿವಾದಗ್ರಸ್ತ ಎನ್ನುತ್ತಿದ್ದಾರೆ.
ಅಯೋಧ್ಯೆ ರಾಮಮಂದಿರ ವಿಚಾರಕ್ಕೆ ಸಂಬಂಧಿಸದಂತೆ ಸುಪ್ರೀಂಕೋರ್ಟ್ ನ ಐವರು ನ್ಯಾಯಾಧೀಶರು ಸೇರಿ ತೀರ್ಪು ನೀಡಿದ್ದಾರೆ. ಅದರಲ್ಲೂ ಓರ್ವ ಮುಸ್ಲಿಂ ಸಮಾಜದ ನ್ಯಾಯಾಧೀಶರೇ ಇದ್ದರು, ಆದರೂ ಓರ್ವ ವಕೀಲರಾಗಿರುವ ಜನನಾಯಕ ತೀರ್ಪನ್ನು ಒಪ್ಪುತ್ತಿಲ್ಲ ಎನ್ನುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದರು.
ಚಂಬಲ್ ಕಣಿವೆಯ ಡಕಾಯಿತರಿಗಿಂತಲೂ ಹೆಚ್ಚು ಕಷ್ಟ ಈ ಜನನಾಯಕರು ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.