Connect with us

LATEST NEWS

ಕೋಟ – ಬೈಕ್ ಗೆ ಕಾರು ಡಿಕ್ಕಿ ಸವಾರ ಸ್ಥಳದಲ್ಲೇ ಸಾವು

ಕೋಟ ಫೆಬ್ರವರಿ 28 : ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಸಾಸ್ತಾನದ ಗುಂಡ್ಮಿ ಅಂಬಾಗಿಲು ಬಳಿ ಇಂದು ನಡೆದಿದೆ.


ಮೃತರನ್ನು ಬೈಕ್ ಸವಾರ ಕೋಟ ಬನ್ನಾಡಿಯ ಸುಭಾಷ್ ಅಮೀನ್ (45) ಎಂದು ಗುರುತಿಸಲಾಗಿದೆ. ಇವರು ಸಿವಿಲ್ ಕಾಂಟ್ರಾಕ್ಟ್ ರಾಗಿದ್ದು, ಕೆಲಸಕ್ಕಾಗಿ ಬನ್ನಾಡಿಯಿಂದ ಉಡುಪಿ ಕಡೆ ಹೋಗುತ್ತಿದ್ದರು.


ಮೃತರು ಪತ್ನಿ, ಮಗು ಮತ್ತು ತಾಯಿಯನ್ನು ಅಗಲಿದ್ದಾರೆ. ಕಾರು ಚಾಲಕ ಕುಂದಾಪುರದ ಚರ್ಚ್ ನ ಫಾದರ್ ಆಗಿದ್ದು, ಅವರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.