Connect with us

LATEST NEWS

ರಾಜಸ್ಥಾನ – ಕಾರಿನ ಮೇಲೆ ಬಿದ್ದ ಮಾರ್ಬಲ್ ತುಂಬಿದ್ದ ಕಂಟೈನರ್.. ಕಾರಿನಲ್ಲಿದ್ದ 4 ಮಂದಿ ಸ್ಥಳದಲ್ಲೇ ಸಾವು

ರಾಜಸ್ಥಾನ: ರಾಜಸ್ಥಾನದ ಪಾಲಿ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಸೇರಿದಂತೆ ನಾಲ್ವರು ಸಾವನಪ್ಪಿದ್ದಾರೆ. ಮಾರ್ಬಲ್ ತುಂಬಿದ ಕಂಟೈನರ್ ಕಾರಿನ ಮೇಲೆ ಬಿದ್ದ ಪರಿಣಾಮ, ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಎಲ್ಲರೂ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸಾವನಪ್ಪಿದವರು ಜೋಧಪುರದ ನಿವಾಸಿಗಳು ಎಂದು ಗುರುತಿಸಲಾಗಿದೆ.


ಪಾಲಿ ಸಿರೋಹಿ ರಾಷ್ಟ್ರೀಯ ಹೆದ್ದಾರಿ 162ರಲ್ಲಿ ಬೆಳಿಗ್ಗೆ ಸಂದರ್ಭ ಮಾರ್ಬಲ್ ತುಂಬಿದ್ದ ಕಂಟೈನರ್ ಲಾರಿ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿದ್ದು, ಲಾರಿಯಲ್ಲಿದ್ದ ಬೃಹತ್ ಕಂಟೈನರ್ ಸೀದಾ ಕಾರಿನ ಮೇಲೆ ಬಿದ್ದಿದೆ. ಕಂಟೈನರ್ ಭಾರಿ ತೂಕ ಇದ್ದ ಕಾರಣ ಕಾರು ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಕಾರಿನಲ್ಲಿದ್ದ ಎಲ್ಲರೂ ಸ್ಥಳದಲ್ಲೇ ಸಾವನಪ್ಪಿದ್ದಾರೆ.