LATEST NEWS
ಪಾಕಿಸ್ತಾನ – ಪೊಲೀಸ್ ಠಾಣೆಗೆ ಸ್ಟೋಟಕ ತುಂಬಿದ ಟ್ರಕ್ ನುಗ್ಗಿಸಿ ಸ್ಪೋಟ – 24ಕ್ಕೂ ಅಧಿಕ ಮಂದಿ ಸಾವು
ಇಸ್ಲಾಮಾಬಾದ್ ಡಿಸೆಂಬರ್ 12 : ಪಾಕಿಸ್ತಾನದ ಪೊಲೀಸ್ ಠಾಣೆಗೆ ಸ್ಟೋಟಕ ತುಂಬಿದ ಟ್ರಕ್ ಒಂದನ್ನು ಉಗ್ರಗಾಮಿಗಳು ನುಗ್ಗಿಸಿ ಆತ್ಮಹತ್ಯಾ ದಾಳಿ ನಡೆಸಿದ ಪರಿಣಾಮ 24ಕ್ಕೂ ಅಧಿಕ ಮಂದಿ ಭದ್ರತಾ ಸಿಬ್ಬಂದಿಗಳು ಸಾವನಪ್ಪಿದ ಘಟನೆ ಪಾಕಿಸ್ತಾನದ ವಾಯವ್ಯ ಭಾಗದಲ್ಲಿ ಇಂದು ಸಂಭವಿಸಿದೆ.
ಅಫ್ಗಾನಿಸ್ತಾನದ ಗಡಿಯಲ್ಲಿರುವ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಇಸ್ಲಾಮಿ ಉಗ್ರಗಾಮಿಗಳು ಪೊಲೀಸ್ ಠಾಣೆಗೆ ಸ್ಫೋಟಕ ತುಂಬಿದ ಟ್ರಕ್ ಅನ್ನು ಡಿಕ್ಕಿ ಹೊಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದಾಳಿಯಲ್ಲಿ ಅನೇಕರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿ ಐಜಾಜ್ ಮೆಹಮೂದ್ ಹೇಳಿದ್ದಾರೆ.
ಪಾಕ್ನಲ್ಲಿ ಹೊಸದಾಗಿ ತಲೆ ಎತ್ತಿರುವ, ತೆಹ್ರೀಕ್–ಇ– ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಘಟನೆಯ ಜತೆ ಗುರುತಿಸಿಕೊಂಡಿರುವ ತೆಹ್ರೀಕ್-ಇ-ಜಿಹಾದ್ ಪಾಕಿಸ್ತಾನ್ (ಟಿಜೆಪಿ) ದಾಳಿಯ ಹೊಣೆ ಹೊತ್ತುಕೊಂಡಿದೆ. ಜತೆಗೆ, ಪಾಕ್ ಸೇನೆಯನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.
You must be logged in to post a comment Login