Connect with us

    LATEST NEWS

    ಕೊನೆಗೂ ಪಾಕಿಸ್ತಾನದಲ್ಲೇ ಇದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅಡ್ರೆಸ್

    ಕರಾಚಿ : ಇಷ್ಟು ದಿನ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅಂದರೆ ಯಾರು ಅಂತ ಗೊತ್ತೆ ಇಲ್ಲ ಅಂತ ನಟಿಸುತ್ತಿದ್ದ ಪಾಕಿಸ್ತಾನ ಕೊನೆಗೂ ಕರಾಚಿಯಲ್ಲೇ ದಾವೂದ್ ಇದ್ದಾನೆ ಎಂದು ಒಪ್ಪಿಕೊಂಡಿದೆ.


    ಪಾಕಿಸ್ತಾನದ ಸುಮಾರು 88 ನಿಷೇಧಿತ ಉಗ್ರ ಸಂಘಟನೆಗಳ ಮೇಲೆ ಆರ್ಥಿಕ ನಿರ್ಬಂಧ ಹೇರಿರುವ ಪಾಕಿಸ್ತಾನ ಸರಕಾರ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದರ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆಯ (ಎಫ್‌ಎಟಿಎಫ್‌) ಬೂದು ಪಟ್ಟಿಯಲ್ಲಿ ಗುರುತಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.


    ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್, ಮಸೂದ್ ಅಜರ್ ಮತ್ತು ಇತರ ಉಗ್ರ ನಾಯಕರ ಎಲ್ಲ ಆಸ್ತಿ, ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ. ಈ ಆದೇಶದ ಪ್ರತಿಯಲ್ಲಿ ದಾವೂದ್‌ನ ವಿಳಾಸವೂ ಉಲ್ಲೇಖವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದರೊಂದಿಗೆ, ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಇರುವುದನ್ನು ಆ ದೇಶ ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply