BANTWAL
ಅನ್ನ ಕಸಿದ ಸರಕಾರದ ವಿರುದ್ದ ಕಲ್ಲಡ್ಕ ಮಕ್ಕಳಿಂದ ಭತ್ತ ಬೆಳೆಯುವ ಮೂಲಕ ತಪರಾಕಿ
ಅನ್ನ ಕಸಿದ ಸರಕಾರದ ವಿರುದ್ದ ಕಲ್ಲಡ್ಕ ಮಕ್ಕಳಿಂದ ಭತ್ತ ಬೆಳೆಯುವ ಮೂಲಕ ತಪರಾಕಿ
ಬಂಟ್ವಾಳ,ಅಕ್ಟೋಬರ್ 23 :ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಿಂದ ಕಲ್ಲಡ್ಕದ ಶಾಲೆಗೆ ಮಧ್ಯಾಹ್ನದ ಅನ್ನಕ್ಕಾಗಿ ಬರುತ್ತಿದ್ದ ಧನ ಸಹಾಯವನ್ನು ನಿಲ್ಲಿಸಿದ ರಾಜ್ಯ ಸರ್ಕಾರಕ್ಕೆ ಕಲ್ಲಡ್ಕ ಶಾಲೆಯ ಮಕ್ಕಳು ಸಿದ್ಧರಾಮಯ್ಯ ಸರಕಾರದ ಕೆನ್ನೆಗೆ ತಪರಾಕಿ ನೀಡುವ ಕಾರ್ಯ ಮಾಡಿದ್ದಾರೆ. .ಅನ್ನ ಕಿತ್ತುಕೊಂಡರೇನಾಯ್ತು ತಮಗೆ ಬೇಕಾದ ಅನ್ನವನ್ನು ತಾವೇ ಬೆಳೆಸುತ್ತೇವೆ ಎನ್ನುವ ಪಣತೊಟ್ಟು ಈ ಮಕ್ಕಳು ಇದೀಗ ತನ್ನ ಬೆವರಿನಿಂದ ಬೆಳೆದ ಭತ್ತದ ಕಟಾವನ್ನೂ ಮಾಡಿ ಮುಗಿಸಿದ್ದಾರೆ.
ಕಲ್ಲಡ್ಕ ಶಾಲೆಯ ಪಕ್ಕದಲ್ಲೇ ಇರುವ ಸುದೇಕಾರು ಎಂಬಲ್ಲಿನ ಶಾಲೆಯ ಗದ್ದೆಯಲ್ಲಿ ಶಾಲಾ ಮಕ್ಕಳು ಶುದ್ಧ ಸಾವಯವ ಬಂಗಾರದ ಬೆಳೆ ಬೆಳೆದಿದ್ದಾರೆ .ಕಲ್ಲಡ್ಕ ಶಾಲೆಯ ಮಕ್ಕಳೇ ನಾಟಿ ಮಾಡಿ ಗೊಬ್ಬರ ಹಾಕಿ ಈ ಭತ್ತದ ಪೈರನ್ನು ಪೋಷಿಸಿದ್ದಾರೆ. ಮಕ್ಕಳ ಬೆವರು ಈಗ ಭತ್ತವಾಗಿ ಪರಿವರ್ತನೆಗೊಂಡಿದೆ. ಸುಮಾರು ಎರಡು ಎಕರೆ ಗದ್ದೆಯಲ್ಲಿ ಶಾಲಾ ಮಕ್ಕಳು ಸೇರಿ ಭತ್ತ ಬೆಳೆದಿದ್ದಾರೆ . ಭತ್ತ ಶಾಲಾ ಮಕ್ಕಳ ಊಟಕ್ಕಾದರೆ ಹುಲ್ಲು ಕಾಲೇಜಿನ ವಸುಧಾರ ಗೋಶಾಲೆಗೆ ಮೀಸಲಿಡಲು ಈ ಮಕ್ಕಳು ಪ್ಲಾನನ್ನೂ ಹಾಕಿಕೊಂಡಿದ್ದಾರೆ.ಗದ್ದೆಯಲ್ಲಿ ಹುಲುಸಾಗಿ ಬೆಳೆದ ಭತ್ತದ ಪೈರುಗಳನ್ನು ಮಕ್ಕಳು ಕಟಾವು ಮಾಡಿದ್ದಾರೆ. ಈ ಕಾರ್ಯದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಸಂಸ್ಥಾಪಕ ಡಾ ಕಲ್ಲಡ್ಕ ಪ್ರಭಾಕರ ಭಟ್ ವಿದ್ಯಾರ್ಥಿಗಳಿಗೆ ಸಾತ್ ನೀಡಿದ್ದಾರೆ.ಗಂಟೆ ಗಂಟೆಗೂ ವಾಟ್ಸಪ್ ಫೇಸ್ ಬುಕ್ ನಲ್ಲಿ ಸ್ಟೇಟಸ್ ಬದಲಿಸುವ ಇಂದಿನ ಮಾರ್ಡನ್ ಮೆಂಟಾಲಿಟಿ ಮಕ್ಕಳಿಗೆ ಈ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ .ಅಕ್ಕಿ ಹೇಗೆ ಉತ್ಪತ್ತಿಯಾಗುತ್ತದೆ ಎಂದರೆ ಅಂಗಡಿಯಲ್ಲಿ ಎಂಬ ಉತ್ತರಿಸುವ ಎಂದಿನ ನಗರ ಪ್ರದೇಶದ ಮಕ್ಕಳ ನಡುವೆ ಕೆಸರು ಗದ್ದೆಗಿಳಿದು, ತಾವೇ ನಾಟಿ ಮಾಡಿ, ತಾವೇ ಕಟಾವು ಮಾಡಿ, ತಾವೇ ತಿನ್ನುವ ಈ ವಿದ್ಯಾರ್ಥಿಗಳು ದೇಶಕ್ಕೆ ಮಾದರಿಯಾಗಿದ್ದಾರೆ .ಶಾಲಾ ಮಕ್ಕಳ ಈ ಸಾಧನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. “ಅನ್ನವನ್ನೇ ಕಿತ್ತು ತಿನ್ನುವ ಕಟುಕರ ಮಧ್ಯೆ ಕಷ್ಟಪಟ್ಟು ಬೆವರು ಸುರಿಸಿ ತಿನ್ನುವ ಮುಗ್ಧ ಮಕ್ಕಳು ” ಎಂಬ ಟ್ಯಾಗ್ ಲೈನ್ ನಲ್ಲಿ ಫೋಟೋ ವೈರಲ್ ಆಗುತ್ತಿದೆ. ದೇವಸ್ಥಾನದಿಂದ ಬರುತ್ತಿದ್ದ ಅನ್ನವನ್ನು ಕಿತ್ತುಕೊಂಡ ಸಿದ್ಧರಾಮಯ್ಯ ಸರಕಾರಕ್ಕೆ ಮಕ್ಕಳು ನೀಡಿದ ಬಲವಾದ ತಪರಾಕಿ ಇದಾಗಿದೆ ಎನ್ನುವ ಕಮೆಂಟ್ ಗಳೂ ಇದೀಗ ಹರಿದಾಡುತ್ತಿದೆ.