LATEST NEWS
6ನೇ ತರಗತಿ ಓದುತ್ತಿರುವ ಇಬ್ಬರು ಬಾಲಕರ ಖಾತೆಗೆ ಬಿತ್ತು 96 ಕೋಟಿ ಹಣ..!
ಬಿಹಾರ: 6ನೇ ತರಗತಿ ಓದುತ್ತಿರುವ ಇಬ್ಬರು ಬಾಲಕರ ಖಾತೆಗೆ 96 ಕೋಟಿ ಹಣ ಜಮೆಯಾದ ಘಟನೆ ಬಿರಾದ ಕತಿಹಾರ್ ಜಿಲ್ಲೆಯಲ್ಲಿ ನಡೆದಿದೆ. ಸೆಪ್ಟೆಂಬರ್ 15 ರಂದು ಕತಿಹಾರ್ ಜಿಲ್ಲೆಯ 6 ನೇ ತರಗತಿ ವಿದ್ಯಾರ್ಥಿಗಳಾದ ಆಶಿಶ್ ಕುಮಾರ್ ಮತ್ತು ಗುರುಚರಣ್ ಬಿಸ್ವಾಸ್ ಅವರ ಖಾತೆಗೆ ಕ್ರಮವಾಗಿ ₹ 6,20,11,100 ಮತ್ತು ₹ 90,52,21,223 ಹಣ ಜಮೆಯಾಗಿದೆ.
ಇಬ್ಬರೂ ಉತ್ತರ ಬಿಹಾರ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆಗಳನ್ನು ಹೊಂದಿದ್ದು, ಇದೇ ಖಾತೆಗಳಿಗೆ ಈಗ ಕೋಟಿ ಕೋಟಿ ಹಣ ಬಂದು ಬಿದ್ದಿದೆ. ಸದ್ಯ ಹಣ ಬಿದ್ದ ಖಾತೆಯನ್ನು ಸ್ಥಗಿತಗೊಳಿಸಲಾಗಿದ್ದು ಖಾತೆಯಿಂದ ಹಣ ತೆಗೆಯದಂತೆ ನಿರ್ಬಂಧಿಸಲಾಗಿದೆ.
ಇನ್ನು ಮಕ್ಕಳ ಖಾತೆಗಳಿಗೆ ಹಣ ಬಂದ ಬಗ್ಗೆ ಮಕ್ಕಳ ಪೋಷಕರನ್ನು ವಿಚಾರಿಸಿದಾಗ, ಹಣದ ಮೂಲದ ಬಗ್ಗೆ ಅವರಿಗೂ ತಿಳಿದಿಲ್ಲ ಎಂಬುದು ಗೊತ್ತಾಗಿದೆ. ಈಗ, ಹಣ ಕಳುಹಿಸಿದವರು ಯಾರು ಎಂದು ಕಂಡುಹಿಡಿಯಲು ತನಿಖೆ ನಡೆಸುತ್ತಿದ್ದೇವೆ ’ ಎಂದು ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್‌ನ ಎಲ್‌ಡಿಎಂ ಎಂ.ಕೆ. ಮಧುಕರ್ ತಿಳಿಸಿದ್ದಾರೆ.