LATEST NEWS
ಶಬರಿಮಲೆಗೆ 29 ದಿನಗಳಲ್ಲಿ 22 ಲಕ್ಷ ಭಕ್ತರು – 164 ಕೋಟಿ ಆದಾಯ
ಕೇರಳ ಡಿಸೆಂಬರ್ 15: ಶಬರಿಮಲೆ ಯಾತ್ರೆ ಋತು ಆರಂಭವಾಗಿ ತಿಂಗಳು ಕಳೆದಿದೆ. ಈ ನಡುವೆ ಈ ಬಾರಿ ಶಬರಿಮಲೆ ಯಾತ್ರೆಗೆ ಜನಸಾಗರವೇ ಹರಿದು ಬಂದಿದ್ದು, ಕಳೆದ 29 ದಿನಗಳಲ್ಲಿ 22 ಲಕ್ಷ ಭಕ್ತರು ಅಯ್ಯಪ್ಪನ ದರ್ಶನ ಪಡೆದಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ತಿರುವಾಂಕೂರು ದೇವಸ್ವಂ ಬೋರ್ಡ್ ಅಧ್ಯಕ್ಷ ಪಿಎಸ್ ಪ್ರಶಾಂತ್ ಡಿಸೆಂಬರ್ 14ರವರೆಗೆ 29 ದಿನಗಳಲ್ಲಿ 22 ಲಕ್ಷ ಅಯ್ಯಪ್ಪ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 4.51 ಲಕ್ಷ ಯಾತ್ರಾರ್ಥಿಗಳು ಹೆಚ್ಚಾಗಿದೆ ಎಂದರು. ಈ ಅವಧಿಯಲ್ಲಿ ಒಟ್ಟು 163.89 ಕೋಟಿ ರೂ ಆದಾಯ ಬಂದಿದ್ದು, ಅದರಲ್ಲಿ 82.67 ಕೋಟಿ ರೂ. ಅರವಣ (ಪ್ರಸಾದ) ಮಾರಾಟದಿಂದ ಬಂದಿದ್ದು, 52.27 ಕೋಟಿ ನೈವೇದ್ಯ ಪೆಟ್ಟಿಗೆಯಿಂದ ಸಂಗ್ರಹವಾಗಿದೆ ಎಂದರು. ಒಟ್ಟು ಆದಾಯದಲ್ಲಿ 22.76 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಬಾರಿ ಶಬರಿಮಲೆಯಲ್ಲಿ ಯಾತಾರ್ಥಿಗಳಿಗೆ ಕೇರಳ ಸರಕಾರ ಉತ್ತಮ ಮೂಲ ಸೌಕರ್ಯ ಕಲ್ಪಿಸಿದೆ . ಶಬರಿಮಲೆ ವಿಚಾರದಲ್ಲಿ ಕೇರಳದ ಹೈಕೋರ್ಟ್ ಸದಾ ಕಣ್ಣಿಟ್ಟಿರುವುದರಿಂದ ಕೇರಳ ಸರಕಾರ ಈ ಬಾರಿ ಯಾವುದೇ ಗೊಂದಲವಾಗದಂತೆ ಕೆಲಸ ನಿರ್ವಹಿಸುತ್ತಿದೆ.