ಕೊಚ್ಚಿ ಡಿಸೆಂಬರ್ 15: ಕಾಡಾನೆಯೊಂದು ರಸ್ತೆ ಬದಿಯಲ್ಲಿದ್ದ ಮರವೊಂದನ್ನು ರಸ್ತೆಗೆ ತಳ್ಳಿದ ಪರಿಣಾಮ ರಸ್ತೆಯಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ಸಾವನಪ್ಪಿದ ಘಟನೆ ನಗರಂಪಾರಾ ಅರಣ್ಯ ಕಚೇರಿ ಬಳಿ ಚೆಂಬಂಕುಝಿ ಎಂಬಲ್ಲಿ ನಡೆದಿದೆ. ತ್ರಿಶೂರ್ ಮೂಲದ ಆನ್ ಮೇರಿ ಸಿ ವಿ(21) ಮೃತ ವಿದ್ಯಾರ್ಥಿನಿ. ಘಟನೆಯಲ್ಲಿ ಆನ್ ಮೇರಿ ಸಹಪಾಠಿ ಅಲ್ತಾಫ್ ಅಬೂಬಕರ್ (21) ಗಾಯಗೊಂಡಿದ್ದಾರೆ.


ಕೋತಮಂಗಲಂನ ಕಾಲೇಜೊಂದರಲ್ಲಿ ಮೂರನೇ ವರ್ಷದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಆನ್ ಮೇರಿ ತನ್ನ ಸಹಪಾಠಿ ಅಲ್ತಾಫ್ ಅಬೂಬಕರ್ ಅವರೊಂದಿಗೆ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ನಗರಂಪಾರಾ ಅರಣ್ಯ ಕಚೇರಿ ಬಳಿ ಚೆಂಬಂಕುಝಿ ಎಂಬಲ್ಲಿ ಕಾಡಾನೆ ತಾಳೆ ಮರವನ್ನು ಬೇರು ಸಮೇತ ಕಿತ್ತು ಹಾಕಿದ್ದು, ಈ ವೇಳೆ ಬೈಕ್ ಮೇಲೆ ಮರ ಬಿದ್ದಿದೆ.
ಕಾಡಾನೆ ತಾಳೆ ಮರವನ್ನು ಬುಡಸಮೇತ ಕಿತ್ತೆಸೆದ ಪರಿಣಾಮ ಕೊಂಬೆ ನೇರವಾಗಿ ಆನ್ ಮೇರಿ ಮೇಲೆ ಬಿದ್ದಿದ್ದು, ಅಲ್ತಾಫ್ ಬೈಕ್ನಿಂದ ಕೆಳಗೆ ಬಿದ್ದಿದ್ದಾನೆ. ಬೈಕ್ 25 ಮೀಟರ್ ದೂರ ಸಾಗಿ ಹಳ್ಳಕ್ಕೆ ಬಿದ್ದಿದೆ. ತಕ್ಷಣ ಇಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆನ್ ಮೇರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

Share Information