Connect with us

    LATEST NEWS

    ಕೊರೊನಾ ಸೊಂಕಿತ ವ್ಯಕ್ತಿಯೊಂದಿಗೆ ಸಾಸ್ತಾನ ಟೋಲ್ ಸಿಬ್ಬಂದಿ ಮಾತು– 6 ಮಂದಿ ಕ್ವಾರಂಟೈನ್

    ಕೊರೊನಾ ಸೊಂಕಿತ ವ್ಯಕ್ತಿಯೊಂದಿಗೆ ಸಾಸ್ತಾನ ಟೋಲ್ ಸಿಬ್ಬಂದಿ ಮಾತು– 6 ಮಂದಿ ಕ್ವಾರಂಟೈನ್

    ಉಡುಪಿ ಎಪ್ರಿಲ್ 28: ಲಾಕ್ ಡೌನ್ ನಡುವೆ ಅಕ್ರಮವಾಗಿ ಊರಿಗೆ ಬಂದ ವ್ಯಕ್ತಿಯಿಂದಾಗಿ ಈಗ ಕರಾವಳಿ ಜಿಲ್ಲೆಗಳಲ್ಲಿ ತಲೆನೋವು ಪ್ರಾರಂಭವಾಗಿದೆ. ಮುಂಬೈನಿಂದ ಹೊರಟ ಖರ್ಜೂರ ಸಾಗಿಸುವ ಲಾರಿ ಹತ್ತಿ ಮಂಡ್ಯಕ್ಕೆ ಬಂದಿದ್ದ ವ್ಯಕ್ತಿಗೆ ಕೊರೊನಾ ಸೊಂಕು ದೃಢವಾಗುತ್ತಿದ್ದಂತೆ ಸೊಂಕಿತನ ಟ್ರಾವೆಲ್ ಹಿಸ್ಟರಿಯಿಂದಾಗಿ ಲಾರಿ ಪಾಸ್ ಆಗಿದ್ದ ಟೋಲ್ ಗೇಟ್‍ನ ಆರು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

    ಮುಂಬೈನಿಂದ ಹೊರಟ ವ್ಯಕ್ತಿ ಕರ್ನಾಟಕ ಪ್ರವೇಶಿಸಿದ್ದು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಲಾರಿಯ ವಿಡಿಯೋ ಪತ್ತೆಯಾಗಿದೆ. ಲಾರಿ ಒಳಗಿದ್ದ ವ್ಯಕ್ತಿ ತೆಕ್ಕಟ್ಟೆ ಸಮೀಪದ ಶಿವಪ್ರಸಾದ್ ಪೆಟ್ರೋಲ್ ಪಂಪ್ ಬಳಿ ಇಳಿದು ಸ್ನಾನ ಮುಗಿಸಿದ್ದು, ನಂತರ ಅಲ್ಲೇ ತಿಂಡಿ ತಿಂದಿದ್ದಾರೆ. ಆಮೇಲೆ ಲಾರಿ ಸಾಸ್ತಾನ ಟೋಲ್ ಗೇಟ್ ಪಾಸ್ ಆಗಿದ್ದಾರೆ. ಅಲ್ಲದೆ ಸೊಂಕಿತ ವ್ಯಕ್ತಿ ಸಾಸ್ತಾನ ಟೋಲ್ ಗೇಟ್ ನಲ್ಲಿ ಟೋಲ್ ಸಿಬ್ಬಂದಿಗಳ ಜೊತೆ ಮಾತನಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಟೋಲ್ ನಲ್ಲಿ ಕೆಲಸ ಮಾಡುವ ಆರು ಮಂದಿಯನ್ನು ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ. ಪೆಟ್ರೋಲ್ ಪಂಪ್ ನಲ್ಲಿದ್ದ ಏಳು ಮಂದಿಯನ್ನು ಕಳೆದ ರಾತ್ರಿಯೇ ಪೊಲೀಸರು ಕ್ವಾರಂಟೈನ್ ಗೆ ಹಾಕಿದ್ದರು. ಪೆಟ್ರೋಲ್ ಪಂಪ್ ಅನ್ನು ಸಹ ಪೊಲೀಸರು ಸಂಪೂರ್ಣವಾಗಿ ಸೀಲ್‍ಡೌನ್ ಮಾಡಿದ್ದಾರೆ.

    ಲಾರಿಯಲ್ಲಿ ಬದಲಿ ಡ್ರೈವರ್, ಕ್ಲೀನರ್ ರೀತಿ ವರ್ತನೆ ಮಾಡಿದ್ದ ಸೋಂಕಿತ ಅವಿತು ಕುಳಿತಿರಲಿಲ್ಲ ಎಂದು ಟೋಲ್ ಸಿಬ್ಬಂದಿ ಹೇಳಿದ್ದಾರೆ. ಖರ್ಜೂರದ ಲಾರಿ ಸಂಪೂರ್ಣ ಪ್ಯಾಕ್ ಆಗಿದ್ದರಿಂದ ವ್ಯಕ್ತಿ ಚಾಲಕನ ಪಕ್ಕದಲ್ಲೇ ಕುಳಿತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *