LATEST NEWS
7 ಜೀವಗಳನ್ನು ಉಳಿಸಿದ ಕಾರ್ಕಳದ ನಿರ್ಮಲಾ ಭಟ್
7 ಜೀವಗಳನ್ನು ಉಳಿಸಿದ ಕಾರ್ಕಳದ ನಿರ್ಮಲಾ ಭಟ್
ಉಡುಪಿ ಜೂನ್ 26: ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಅಂಗಾಂಗಗಳು ಇದೀಗ 7 ಜೀವಗಳನ್ನು ಉಳಿಸಿದೆ. ಅಂಗಾಂಗಗಳನ್ನು ಮಂಗಳೂರಿಗೆ ಸಾಗಿಸಲು ಉಡುಪಿ ಹಾಗೂ ಮಂಗಳೂರು ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿರೋ ಟ್ರಾಫಿಕ್ ನಿರ್ಮಿಸಿ ಅಂಗಾಂಗಳ ರವಾನೆ ಸಹಕರಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿರ್ಮಲಾ ಭಟ್ ಎಂಬ ಮಹಿಳೆಯ ಮೆದುಳು ಅಪಘಾತದಿಂದ ನಿಷ್ಕ್ರಿಯಗೊಂಡಿತ್ತು. ಈ ಬಗ್ಗೆ ಮಣಿಪಾಲ ವೈದ್ಯರು ಘೋಷಿಸಿದ ಹಿನ್ನಲೆಯಲ್ಲಿ ಆಕೆಯ ಮನೆಯವರು ಅಂಗಾಂಗ ದಾನಕ್ಕೆ ಮುಂದಾಗಿದ್ದರು.
ಹೀಗಾಗಿ ಮನೆಯವರ ಅನುಮತಿ ಮೇಲೆ ಮೃತ ಮಹಿಳೆ ನಿರ್ಮಲಾ ಅವರ ಎರಡು ಹೃದಯ ಕವಾಟ, ಕಣ್ಣು ಗುಡ್ಡೆ (ಕಾರ್ನಿಯಾ), ಮೂತ್ರಪಿಂಡ (ಕಿಡ್ನಿ) ಮತ್ತು ಯಕೃತ್ತು (ಲಿವರ್) ಕಸಿ ಮಾಡಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಕಣ್ಣು ಗುಡ್ಡೆ ಮತ್ತು ಒಂದು ಮೂತ್ರಪಿಂಡವನ್ನು, ಬೆಂಗಳೂರಿನ ಗುರುತಿಸಲ್ಪಟ್ಟ ರೋಗಿಗಳಿಗೆ ಯಕೃತ್ತು ಮತ್ತು ಎರಡು ಹೃದಯ ಕವಾಟ, ಮಂಗಳೂರಿನ ಗುರುತಿಸಲ್ಪಟ್ಟ ರೋಗಿಗೆ ಒಂದು ಮೂತ್ರಪಿಂಡ ನೀಡಲು ಬೆಂಗಳೂರು ಹಾಗೂ ಮಂಗಳೂರಿಗೆ ಅಂಗಾಗ ಝೀರೋ ಟ್ರಾಫಿಕ್ ಮೂಲಕ ರವಾನೆ ಮಾಡಲಾಯಿತು. ಈ ಅಂಗಾಂಗ ದಾನದಿಂದ 7ಮಂದಿಗೆ ಹೊಸ ಜೀವನ ಸಿಕ್ಕಿದಂತಾಗಿದೆ