Connect with us

    LATEST NEWS

    ಮುಂಬೈ ಪೊಲೀಸರಿಂದ ‘ಅಪರೇಷನ್ ಆಲ್ ಔಟ್’, 203 ಸ್ಥಳಗಳಲ್ಲಿ ದಾಳಿ 36 ಕ್ರಿಮಿನಲ್‌ಗಳ ಬಂಧನ

    ಮುಂಬೈ:  ಮುಂಬೈ ಪೊಲೀಸರು(Mumbai Police)   ಸುರಕ್ಷತಾ ದೃಷ್ಟಿಯಿಂದ  ‘ಆಪರೇಷನ್ ಆಲ್ ಔಟ್’ (operation all out ) ಕಾರ್ಯಾಚರಣೆ ನಡೆಸಿ 203 ಸ್ಥಳಗಳಲ್ಲಿ ದಾಳಿ ನಡೆಸಿ  36 ಕ್ರಿಮಿನಲ್ ಗಳನ್ನು ಬಂಧಿಸಿದ್ದಾರೆ.

     ನಗರದಾದ್ಯಂತ 1,638 ಹೋಟೆಲ್‌ಗಳು, ಲಾಡ್ಜ್‌ಗಳು ಮತ್ತು ಅತಿಥಿಗೃಹಗಳನ್ನು ಪರಿಶೀಲಿಸಿ . ನಾಕಾಬಂದಿಯ ಜೊತೆಗೆ 203 ಸ್ಥಳಗಳಲ್ಲಿ ದಾಳಿ ನಡೆಸಿದ ಮುಂಬೈ ಪೊಲೀಸರು 36 ಆರೋಪಿಗಳನ್ನು ಬಂಧಿಸಿದ್ದಾರೆ.  ಅವರಲ್ಲಿ ಪರಾರಿಯಾದ ಆರೋಪಿಗಳು, ಬಂಧನ ವಾರಂಟ್‌ಗಳು ಜಾರಿಯಲ್ಲಿರುವವರು, ನಿರ್ಬಂಧಿತ ವ್ಯಕ್ತಿಗಳು ಸೇರಿದ್ದಾರೆ. ಅಕ್ರಮವಾಗಿ ಶಸ್ತ್ರಾಸ್ತ್ರ ಮತ್ತು ಚಾಕು ಹೊಂದಿದ್ದ ವ್ಯಕ್ತಿಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪೊಲೀಸರು ಮುಂಬೈ ಮಹಾನಗರದ  1,096 ಸ್ಥಳಗಳಲ್ಲಿ ಕುಂಬಿಂಗ್ ಆಪರೇಷನ್ ಮತ್ತು ನಾಕಾಬಂದಿ ನಡೆಸಿ 9,452 ದ್ವಿಚಕ್ರ ಮತ್ತು  ಕಾರುಗಳನ್ನು ಪರಿಶೀಲಿಸಿದರು. ಪರಿಶೀಲನೆ ವೇಳೆ ಹಲವು ವಾಹನಗಳು ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿ, 2,779 ವಾಹನಗಳ ವಿರುದ್ಧ ಮೋಟಾರ್ ವಾಹನ ಕಾಯ್ದೆಯಡಿ ಕ್ರಮ ಕೈಗೊಂಡಿದ್ದಾರೆ. ಬಂಧಿತರಲ್ಲಿಎರಡು ಮಂದಿ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದರು. 17 ಮಂದಿ ಅಕ್ರಮ ವ್ಯಾಪಾರ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಇದೇ ಸಂದರ್ಭ  ಅಕ್ರಮ ಮದ್ಯ ಮತ್ತು ಜೂಜಿನ ವ್ಯಾಪಾರದ ಮೇಲೂ ಕ್ರಮ ಕೈಗೊಳ್ಳಲಾಗಿದೆ ಎಂದು ಆಪರೇಷನ್‌ನಲ್ಲಿ ಭಾಗವಹಿಸಿದ್ದ ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಇದಲ್ಲದೆ, ಅನುಮಾನಾಸ್ಪದ ವರ್ತನೆ ತೋರಿದ 110 ಮಂದಿಯ ವಿರುದ್ಧ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ 142, 120, 122 ಮತ್ತು 135ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇಂತಹ ಕಾರ್ಯಾಚರಣೆಗಳನ್ನು ಮುಂಬೈ ಪೊಲೀಸರು ಆಗಿಂದಾಗೆ  ಸುರಕ್ಷತೆಯ ದೃಷ್ಟಿಯಿಂದ  ಆಯೋಜಿಸುತ್ತಿರುತ್ತಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply