Connect with us

    LATEST NEWS

    ರಾಜ್ಯದ ಗರ್ವನರ್ ಬಿಜೆಪಿಯ ಕೈಗೊಂಬೆಯಾಗಿದ್ದು….ಗವರ್ನರ್ ಯಾವ ಕೆಳ ಮಟ್ಟಕ್ಕೆ ಇಳಿದಿದ್ದಾರೆ ಅನ್ನೋದನ್ನ ತೋರಿಸ್ತಿದೆ – ದಿನೇಶ್ ಗುಂಡೂರಾವ್

    ಮಂಗಳೂರು ಅಗಸ್ಟ್ 17: ರಾಜ್ಯದ ಗರ್ವನರ್ ಬಿಜೆಪಿಯ ಕೈಗೊಂಬೆಯಾಗಿದ್ದು, ಗವರ್ನರ್ ಯಾವ ಕೆಳ ಮಟ್ಟಕ್ಕೆ ಇಳಿದಿದ್ದಾರೆ ಅನ್ನೋದನ್ನ ತೋರಿಸ್ತಿದೆ ಇದು ತೋರಿಸುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.


    ಮಂಗಳೂರಿನಲ್ಲಿ ಮಾತನಾಡಿದ ಅವರು ಇದು ಒಂದು ಷಡ್ಯಂತ್ರ ಅನ್ನೋದು ನಮಗೆ ಮೊದಲೇ ಗೊತ್ತಿತ್ತು, ಮೋದಿ ಸರ್ಕಾರ ಎಲ್ಲಾ ಸಂವಿಧಾನಿಕ ಹುದ್ದೆಗಳನ್ನ ಸರ್ವನಾಶ ಮಾಡ್ತಿದೆ. ಇಡಿ, ಐಟಿ, ಸಿಬಿಐ ಎಲ್ಲವನ್ನೂ ದುರುಪಯೋಗ ಮಾಡಿದೆ ಎಂದರು. ಈಗ ರಾಜ್ಯಪಾಲರ ಕಚೇರಿ ಈಗ ಬಿಜೆಪಿ ಕಚೇರಿ ಆಗಿದೆ. ಗವರ್ನರ್ ತಪ್ಪೇ ಮಾಡದ ಸಿಎಂ ವಿರುದ್ದ ಅನುಮತಿ ಕೊಟ್ಟಿದ್ದಾರೆ. ಗವರ್ನರ್ ಯಾವ ಕೆಳ ಮಟ್ಟಕ್ಕೆ ಇಳಿದಿದ್ದಾರೆ ಅನ್ನೋದನ್ನ ತೋರಿಸ್ತಿದೆ ಎಂದರು. ಬಿಜೆಪಿಯ ಕೈಗೊಂಬೆಯಾಗಿ ಗವರ್ನರ್ ಆಡ್ತಿದಾರೆ

    ನಾವು ಕಾನೂನಿನ ಹೋರಾಟ ಮಾಡ್ತಾ ಇದೇವೆ. ಸಿಎಂ ಜಗ್ಗೋದು ಇಲ್ಲ, ಬಗ್ಗೋದು ಇಲ್ಲ. ಬಿಜೆಪಿ ದುರ್ನಡತೆ ಮುಂದುವರೆದಿದೆ, ಈ ಕೇಸ್ ನಲ್ಲಿ ಕಾನೂನು ಹೋರಾಟ ಮಾಡ್ತೇವೆ ಎಂದರು. ಇದಕ್ಕೆ ಜನರು ಕೂಡ ತಕ್ಕ ಉತ್ತರ ಕೊಡ್ತಾರೆ, ಚುನಾಯಿತ ಸರ್ಕಾರ ಅಸ್ಥಿರಗೊಳಿಸೋ ಕೆಲಸ ಮಾಡ್ತಿದಾರೆ. ಯಡಿಯೂರಪ್ಪ ಅವರ ಮೇಲೆ ಲೋಕಾಯುಕ್ತ ಸಂತೋಷ್ ಹೆಗ್ಡೆಯವರೇ ವರದಿ ಕೊಟ್ಟಿದ್ದರು, ಯಡಿಯೂರಪ್ಪ ತಪ್ಪಿನ ಬಗ್ಗೆ ಆ ವರದಿಯಲ್ಲಿ ಇತ್ತು, ಆದರೂ ಗವರ್ನರ್ ಆಗ ಬಹಳಷ್ಟು ನೋಡಿ ಪ್ಯಾಷಿಕ್ಯೂಷನ್ ಅನುಮತಿ ಕೊಟ್ಟಿದ್ದರು. ಯಡಿಯೂರಪ್ಪರಿಗೂ ಸಿದ್ದರಾಮಯ್ಯರಿಗೂ ಹೋಲಿಕೆ ಮಾಡಲು ಆಗುವುದಿಲ್ಲ ಎಂದ ಅವರು ಯಡಿಯೂರಪ್ಪ ಒಬ್ಬ ಮಹಾಭ್ರಷ್ಟ, ಅವರು ಹಲವು ಕೇಸ್ ಗಳಲ್ಲಿ ಇದ್ದಾರೆ. ಅತೀ ಹೆಚ್ಚು ಭ್ರಷ್ಟಾಚಾರ ಮಾಡಿದ್ದಕ್ಕೆ ಅವರನ್ನ ಬಿಜೆಪಿಯೇ ಎರಡು ಬಾರಿ ಕಿತ್ತಾಕಿತ್ತು. ಬಿಜೆಪಿ ಕೆಳಮಟ್ಟಕ್ಕೆ ಇಳಿದಿದೆ, ಕಾನೂನು ಬಾಹಿರ ಕೆಲಸ ಮಾಡ್ತಿದೆ. ಬಿಜೆಪಿ ರಾಮ ರಾಜ್ಯ ಅಂತೆಲ್ಲಾ ಹೇಳಿ ಈ ರೀತಿ ಮಾಡ್ತಾ ಇದೆ. ಬಡವರ ಪರ ನಿಲ್ಲೋ ಜನನಾಯಕನ, ಜನಪ್ರಿಯ ಜನನಾಯಕನ ಮುಗಿಸೋಕೆ ಹೊರಟಿದ್ದಾರೆ ಎಂದರು.

    ರಾಜ್ಯಪಾಲರ ನಡೆ ಅತ್ಯಂತ ಅಕ್ಷಮ್ಯ ಅಪರಾಧ, ಗೆಹ್ಲೋಟ್ ವರ್ತನೆ ಸರಿಯಲ್ಲ, ಆವತ್ತು ಶೋಕಾಸ್ ನೊಟೀಸ್ ಕೊಟ್ಟಾಗಲೇ ಗೊತ್ತಿತ್ತು. ಮೋದಿ, ಅಮಿತ್ ಶಾ ಕಚೇರಿಯಲ್ಲೇ ಇದೆಲ್ಲಾ ಸಿದ್ದವಾಗಿದೆ. ಸಿಎಂ ಸಿದ್ದರಾಮಯ್ಯ ಇನ್ನಷ್ಟು ಗಟ್ಟಿಯಾಗಿದ್ದಾರೆ, ಜನಪ್ರಿಯರಾಗಿದ್ದಾರೆ. ಬಿಜೆಪಿ ಪಾದಯಾತ್ರೆ ಅತೀ ದೊಡ್ಡ ಪ್ಲಾಪ್ ಶೋ, ನಮ್ಮ ಸಮಾವೇಶ ಗೆದ್ದಿದೆ .

    Share Information
    Advertisement
    Click to comment

    You must be logged in to post a comment Login

    Leave a Reply