LATEST NEWS
ಫಾರಿನ್ ಹುಡುಗಿ ಮೋಹ ಯುವಕನಿಗಾಯ್ತು ದೋಖಾ
ಫಾರಿನ್ ಹುಡುಗಿ ಮೋಹ ಯುವಕನಿಗಾಯ್ತು ದೋಖಾ
ಮಂಗಳೂರು ಅಕ್ಟೋಬರ್ 17: ಫಾರಿನ್ ಹುಡುಗಿಯನ್ನು ಮದುವೆಯಾಗು ಆಸೆಯಿಂದ ಲಕ್ಷಾಂತರ ರೂಪಾಯಿಯನ್ನು ಕಳೆದುಕೊಂಡ ಘಟನೆ ಮಂಗಳೂರು ಹೊರವಲಯದ ಮುಲ್ಕಿಯಲ್ಲಿ ನಡೆದಿದೆ.
ಮೆಟ್ರಿ ಮೋನಿಯಲ್ ವೆಬ್ ಸೈಟ್ ನಲ್ಲಿ ವಿವರ ಸಲ್ಲಿಸಿದ ಮಂಗಳೂರು ಹೊರವಲಯದ ಮೂಲ್ಕಿಯ ಯುವಕನಿಗೆ ಇಂಗ್ಲೆಂಡ್ ನ ಯುವತಿಯೊಬ್ಬಳು ವಿವಾಹವಾಗುವುದಾಗಿ ನಂಬಿಸಿದ್ದಳು. ವಿದೇಶಿ ಯುವತಿಯ ಜಾಲದಲ್ಲಿ ಬಿದ್ದ ಯುವಕ ಈಗ ಸರಿ ಸುಮಾರು 11.39 ಲಕ್ಷ ರೂಪಾಯಿ ಕಳೆದು ಕೊಂಡಿದ್ದಾನೆ.
ಘಟನೆ ವಿವರ
ಸಿಂಗಾಪುರದಲ್ಲಿ ಉದ್ಯೋಗದಲ್ಲಿದ್ದ ಮುಲ್ಕಿಯ ಯುವಕನಿಗೆ ಈಗಾಗಲೇ ಒಂದು ಮದುವೆಯಾಗಿದೆ. ಕೆಲವು ಸಮಯದ ಹಿಂದೆ ಹೆಂಡತಿಗೆ ಡೈವೋರ್ಸ್ ನೀಡಿದ್ದ ಈತ ಈಗ ಎರಡನೇ ಮದುವೆಗೋಸ್ಕರ 2017 ರ ಜೂನ್ ನಲ್ಲಿ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ತನ್ನ ವಿವರ ಸಲ್ಲಿಸಿದ್ದ.
ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿರುವ ಯುವಕನ ವಿವರಕ್ಕೆ ಇಂಗ್ಲೆಂಡ್ ನ ಸ್ಟೆಲ್ಲಾ ಮಾರೀಸ್ ಎಂಬ ಯುವತಿ ಪ್ರತಿಕ್ರಿಯಿಸಿದ್ದಳು. ಈ ಹಿನ್ನೆಲೆಯಲ್ಲಿ ಮೂಲ್ಕಿಯ ಯುವಕನ ಮೊಬೈಲ್ ಗೆ ವಾಟ್ಸಪ್ ಮೂಲಕ ಸಂದೇಶ ಕಳಿಸಿದ ಇಂಗ್ಲೆಂಡ್ ಸ್ಟೆಲ್ಲಾ, ಇಂಗ್ಲೆಂಡಿಗೆ ಬರುವಂತೆ ಯುವಕನನ್ನು ಆಹ್ವಾನಿಸಿದ್ದಳು. ಹಾಗೂ ಭಾರತದಲ್ಲಿರುವ ಮೈಕಲ್ ಅಂಟೋನಿ ಎಂಬುವರು ಪರಿಚಯ ನೀಡಿ ಮೊಬೈಲ್ ಸಂಖ್ಯೆಯನ್ನು ಸ್ಟೆಲ್ಲಾ ನೀಡಿದ್ದಳು.
ಯುವಕನಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ ವಂಚಕರು
ಮುಲ್ಕಿಯ ಯುವಕ ಮೈಕಲ್ ಅಂಟೋನಿ ಸಂಪರ್ಕಿಸಿದಾಗ ವೀಸಾ ವೆಚ್ಚ 26,560 ರೂಪಾಯಿ ಕಳಿಸುವಂತೆ ಆತ ಸೂಚನೆ ನೀಡಿದ್ದ. ಅದರಂತೆ ಮಂಗಳೂರು ಹೊರವಲಯದ ಕಿನ್ನಿಗೋಳಿಯ ಬ್ಯಾಂಕ್ ವೊಂದರ ತನ್ನ ಖಾತೆಯಿಂದ ಯುವಕ ನೆಫ್ಟ್ ಮೂಲಕ ಹಣ ಕಳುಹಿಸಿದ್ದ. ಆ ಬಳಿಕ ಮೈಕಲ್ ಆ್ಯಂಟನಿ ಮತ್ತು ಜೇಮ್ಸ್ ಬೆವನ್ ಇ ಮೇಲ್ ಮುಖೇನ ಭಯೋತ್ಪಾದನೆ ಚಟುವಟಿಕೆಗೆ ಸಂಬಂಧವಿಲ್ಲ ಎಂಬ ಭದ್ರತಾ ಪ್ರಮಾಣಪತ್ರ ಕ್ಕೆ 83,000 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು. ಅದಕ್ಕೂ ಸಮ್ಮತಿಸಿದ್ದ ಯುವಕ ಹಣ ರವಾನಿಸಿದ್ದಾನೆ.
ಇದೇ ರೀತಿ ಸ್ಟೆಲ್ಲಾ ಮಾರೀಸ್ ,ಮೈಕೆಲ್ ಆ್ಯಂಟನಿ, ಮತ್ತು ಜೇಮ್ಸ್ ಬೆವೇನ್ ಮದುವೆ ,ಕೆಲಸ ,ವೀಸಾ ನೆಪವೊಡ್ಡಿ ಸುಮಾರು 11.39 ಲಕ್ಷ ರೂಪಾಯಿ ವಂಚಿಸಿದ್ದಾರೆ. ವಂಚನೆಗೊಳಗಾದ ವಿಚಾರ ಗೊತ್ತಾಗುತ್ತಿದ್ದಂತೆ ಯುವಕ ಮಂಗಳೂರಿನ ಸೈಬರ್ ವಿಭಾಗದ ಪೊಲೀಸರಿಗೆ ದೂರು ನೀಡಿದ್ದಾನೆ. ದೂರು ಆಧರಿಸಿ ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.
You must be logged in to post a comment Login