LATEST NEWS
ಮಲ್ಪೆ ಪಡುಕರೆ ಸಮುದ್ರ ತೀರದಲ್ಲಿ ಬೃಹತ್ ಅಲೆಗೆ ಕೊಚ್ಚಿ ಹೋದ ಯುವಕರು

ಮಲ್ಪೆ ಪಡುಕರೆ ಸಮುದ್ರ ತೀರದಲ್ಲಿ ಬೃಹತ್ ಅಲೆಗೆ ಕೊಚ್ಚಿ ಹೋದ ಯುವಕರು
ಉಡುಪಿ ಜುಲೈ 25: ಮಲ್ಪೆಯ ಪಡುಕರೆ ತೀರದಲ್ಲಿ ನಾಡದೋಣಿ ಮೀನುಗಾರಿಕೆ ಮುಗಿಸಿ ದೋಣಿ ಎಳೆಯುತ್ತಿರುವ ಸಂದರ್ಭದಲ್ಲಿ ಅಪ್ಪಳಿಸಿದ ಬೃಹತ್ ಅಲೆಗೆ ಒರ್ವ ಮೃತಪಟ್ಟು ಇನ್ನೋರ್ವ ಸಮುದ್ರ ಪಾಲಾಗಿರುವ ಘಟನೆ ನಡೆದಿದೆ.
ಸಮುದ್ರ ಪಾಲಾಗಿರುವವರನ್ನು ನಿಶಾಂತ್ (22) ಮತ್ತು ನಿತೇಶ್ (29) ಎಂದು ಗುರುತಿಸಲಾಗಿದೆ. ಮಲ್ಪೆ ಪಡುಕೆರೆಯ ಶಾಂತಿ ನಗರ ಪ್ರದೇಶದಲ್ಲಿ ಮೀನುಗಾರಿಕೆಗೆ ತೆರಳಿದ್ದ ಯುವಕರು ಬುಧವಾರ ಬೆಳಗ್ಗೆ ಮೀನುಗಾರಿಕೆ ಮುಗಿಸಿ ದಡಕ್ಕೆ ಬಂದಿದ್ದರು. ಸಮುದ್ರ ತೀರದಿಂದ
ಸುಮಾರು 200 ಮೀಟರ್ ದೂರದಲ್ಲಿ ಎಂಬತ್ತುಕ್ಕೂ ಅಧಿಕ ಮಂದಿ ದೋಣಿಯನ್ನು ದಡಕ್ಕೆ ಎಳೆಯುವ ವೇಳೆ ಬೃಹತ್ ಅಲೆ ಅಪ್ಪಳಿಸಿದೆ ಎನ್ನಲಾಗಿದೆ. ಪರಿಣಾಮ ಇಬ್ಬರು ಯುವಕರು ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಇವರ ಓರ್ವನ ಮೃತ ದೇಹ ಅಲ್ಲೇ ಸಮೀಪ ಪತ್ತೆಯಾಗಿದ್ದು, ಇನೋರ್ವ ನೀರಿನಲ್ಲಿ ನಾಪತ್ತೆಯಾಗಿದ್ದಾನೆ.

ಸ್ಥಳಕ್ಕೆ ಮಲ್ಪೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸ್ಥಳೀಯರು ಮತ್ತೊಬ್ಬ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಿತೇಶ್‌ಗೆ (29) ಮದುವೆಯಾಗಿ ಏಳು ತಿಂಗಳಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.