ಜುಲೈ 27 ರ ಚಂದ್ರ ಗ್ರಹಣ ದಿನ ಕುಕ್ಕೆಯಲ್ಲಿ ಸಂಜೆ 7ರ ಬಳಿಕ ದೇವರ ದರ್ಶನ ಇಲ್ಲ
ಸುಬ್ರಹ್ಮಣ್ಯ ಜುಲೈ 26: ಜುಲೈ 27 ರಂದು ಚಂದ್ರ ಗ್ರಹಣ ಸಂಭವಿಸುತ್ತಿರುವುದರಿಂದ ದಕ್ಷಿಣಕನ್ನಡ ಜಿಲ್ಲೆಯ ದೇವಸ್ಥಾನಗಳಲ್ಲಿ ದೇವರ ದರ್ಶನದಲ್ಲಿ ತುಸು ವ್ಯತ್ಯಾಸ ಆಗುವ ಸಾಧ್ಯತೆ ಇದೆ.
ಪ್ರಖ್ಯಾತ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಚಂದ್ರ ಗ್ರಹಣ ಸಂಭವಿಸುವ ದಿನ ಜುಲೈ 27ರ ರಾತ್ರಿ 7 ಗಂಟೆಯ ಬಳಿಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಹಗಲಿನಲ್ಲಿ ನಡೆಯುವ ಮಧ್ಯಾಹ್ನದ ಪೂಜೆ ಹಾಗೂ ಇತರ ಸೇವೆಗಳು ಎಂದಿನಂತೆ ನಿಗದಿತ ಸಮಯಕ್ಕೆ ನಡೆಯಲಿದ್ದು ರಾತ್ರಿ ನಡೆಯುವ ಮಹಾ ಪೂಜೆ ಸಂಜೆ 6.30ಕ್ಕೆ ನೆರವೇರುವುದು.

ರಾತ್ರಿ 7 ಗಂಟೆಯ ಬಳಿಕ ದೇವರ ದರ್ಶನಕ್ಕೆ ಅವಕಾಶವಿಲ್ಲ. ಅಲ್ಲದೆ ಸಂಜೆ ನಡೆಯುವ ಆಶ್ಲೇಷ ಬಲಿ ಸೇವೆ ಕೂಡ ಚಂದ್ರ ಗ್ರಹಣದ ಹಿನ್ನಲೆಯಲ್ಲಿ ಇರುವುದಿಲ್ಲ. ಹಾಗೂ ರಾತ್ರಿ ದೇವಸ್ಥಾನದಲ್ಲಿ ನಡೆಯುವ ಅನ್ನಸಂತರ್ಪಣೆ ಕೂಡ ನಡೆಯುವುದಿಲ್ಲ ಎಂದು ದೇಗುಲದ ಮುಖ್ಯ ಕಾರ್ಯ ನಿರ್ವಣಾಧಿಕಾರಿ ರವೀಂದ್ರ ಎಂ. ಎಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.