Connect with us

LATEST NEWS

ಕುಂದಾಪುರ ಕೊಡೇರಿ ದೋಣಿ ದುರಂತ ಒರ್ವ ಮೀನುಗಾರನ ಶವ ಪತ್ತೆ

ಕುಂದಾಪುರ ಅಗಸ್ಟ್ 17: ನಿನ್ನೆ ಕುಂದಾಪುರದ ಕೊಡೇರಿ ಎಂಬಲ್ಲಿ ನಡೆದ ಮೀನುಗಾರಿಕಾ ದೋಣಿ ದುರಂತದಲ್ಲಿ ನಾಪತ್ತೆಯಾಗಿರುವ ನಾಲ್ಕು ಮಂದಿಯಲ್ಲಿ ಒರ್ವನ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ನಾಗ ಖಾರ್ವಿ(55) ಎಂದು ಗುರುತಿಸಲಾಗಿದೆ, ಇಂದು ಬೆಳಿಗ್ಗೆ ಕಿರಿಮಂಜೇಶ್ವರದ ಹೊಸ ಹಿತ್ಲು ಸಮೀಪ ಶವ ಪತ್ತೆಯಾಗಿದೆ.

ನಾಪತ್ತೆಯಾಗರುವ ನಾಲ್ವರು ಮೀನುಗಾರರಲ್ಲಿ ಓರ್ವನ ಶವ ಮಾತ್ರ ಪತ್ತೆಯಾಗಿದ್ದು, ಇನ್ನುಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ನಿನ್ನೆ ಕೊಡೇರಿಯ ಸಮುದ್ರ ತೀರದಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ನಾಡದೋಣಿ ಬ್ರೇಕ್ ವಾಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಹನ್ನೆರಡು ಮಂದಿ ಸಮುದ್ರಕ್ಕೆ ಬಿದಿದ್ದು ಅದರಲ್ಲಿ ಎಂಟು ಮಂದಿಯನ್ನು ರಕ್ಷಣೆ ಮಾಡಲಾಗಿತ್ತು. ಉಳಿದ ನಾಲ್ಕು ಮಂದಿ ಉಪ್ಪುಂದ ಕರ್ಕಿಕಳಿ ನಿವಾಸಿಗಳಾದ ಬಿ. ನಾಗ (46) ಲಕ್ಷ್ಮಣ (34) ಮಂಜುನಾಥ (38) ಹಾಗೂ ಇನ್ನೋರ್ವ ಉಪ್ಪುಂದ ಕರ್ಕಿಕಳಿ ಫಿಶರೀಸ್ ಕಾಲೋನಿಯ ಗಂಜೇರಿ ನಿವಾಸಿ ಶೇಖರ ( 35 ) ನಾಪತ್ತೆಯಾಗಿದ್ದರು ಇಂದು ಬೆಳಿಗ್ಗೆ ನಾಗ ಖಾರ್ವಿ ಅವರ ಮೃತದೇಹ ಪತ್ತೆಯಾಗಿದ್ದು ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Facebook Comments

comments